ಶಿಕ್ಷಕ ವೃತ್ತಿ ಪವಿತ್ರವಾದದ್ದು – ಚಂದಣ್ಣ ಚಡಗುಂಡ..!

ಶಹಾಪುರ :ಎಲ್ಲ ವೃತ್ತಿಗಳಲ್ಲೂ ಶಿಕ್ಷಕ ವೃತ್ತಿ ಶ್ರೇಷ್ಠವಾದದ್ದು, ಕಾರಣ ಮಕ್ಕಳಿಗೆ ಉತ್ತಮವಾದ ಸಂಸ್ಕಾರ ನೀಡಿ ವಿದ್ಯಾದಾನ ಮಾಡಿ ಉತ್ತಮ ಸಮಾಜಕ್ಕೆ ಪ್ರಜೆಗಳನ್ನು ರೂಪಿಸುವ ಕೆಲಸ ಶಿಕ್ಷಕರಾದ್ದಗಿದೆ ಎಂದು ಚಂದಣ್ಣ ಚಡಗುಂಡ ಹೇಳಿದರು.ಸಗರದ ಶ್ರೀ ಚರಬಸವೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆಯ ಅಂಗವಾಗಿ ಸರ್ವಪಲ್ಲಿ ರಾಧಾಕೃಷ್ಣ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಿ ಮಾತಾನಾಡಿದರು. ಸರ್ವಪಲ್ಲಿ ರಾಧಾಕೃಷ್ಣ ಅವರ ಆದರ್ಶ ತತ್ವಗಳು ಇಂದಿನ ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಉತ್ತಮ ಬದುಕು ರೂಪಿಸಿಕೊಳ್ಳಲು ಸಾಧ್ಯ ಎಂದು ಹೇಳಿದರು.ಈ ಸಂದರ್ಭದಲ್ಲಿ ಅಮರಮ್ಮ ಪಾಟೀಲ್, ನಿಂಗಪ್ಪ ಹೈಯಾಳಕರ್ ಬಸವರಾಜ್ ಬೂದನೂರ, ಚಂದ್ರಪ್ಪ ವಡಿಗೇರ ಹಾಗೂ ಇತರರು ಉಪಸ್ಥಿತರಿದ್ದರು.

ವರದಿ- ಬಸವರಾಜ ಸಿನ್ನೂರ ೆಕ್ಸ್ ಪ್ರೆಸ್ ಟಿವಿ ಶಹಾಪುರ.

Please follow and like us:

Related posts

Leave a Comment