ಪತ್ನಿಯ ಸಾವಿನಿಂದ ಮನನೊಂದು ಪತಿ ಆತ್ಮಹತ್ಯೆ..!

ಆನೇಕಲ್ : ಪತ್ನಿಯ ಸಾವಿನಿಂದ ಮನನೊಂದಿದ್ದ ಪತಿ ನಿನ್ನೆ ಪತ್ನಿಯ ಒಂದು ತಿಂಗಳ ತಿಥಿ ಕಾರ್ಯ ಮುಗಿಸಿ ಬಳಿಕ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ಆನೇಕಲ್ನಲ್ಲಿ ನಡೆದಿದೆ. ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಸಮಂದೂರು ರೈಲ್ವೆ ಹಳಿ ಬಳಿ ಈ ಘಟನೆ ನಡೆದಿದೆ. ಸುರಜಕ್ಕನಹಳ್ಳಿ ನಿವಾಸಿ ಮುನಿರಾಜು(30) ಮೃತ ವ್ಯಕ್ತಿ.ನಾಲ್ಕು ವರ್ಷಗಳ ಹಿಂದೆ ಮಾರನಾಯಕನಹಳ್ಳಿ ಮೂಲದ ಯುವತಿಯನ್ನ ಮದುವೆಯಾಗಿದ್ದ. ಇವರಿಗೆ ಒಂದು ಹೆಣ್ಣು ಮಗುವು ಸಹ ಇದೆ. ಆದ್ರೆ ಕಳೆದ ಒಂದು ತಿಂಗಳ ಹಿಂದೆ ಮುನಿರಾಜು ಪತ್ನಿ ಅನಾರೋಗ್ಯಕ್ಕೆ ತುತ್ತಾಗಿ ಸಾವನ್ನಪ್ಪಿದ್ದರು.ಇದರಿಂದ ಮನನೊಂದಿದ್ದ ವ್ಯಕ್ತಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದ. ನಿನ್ನೆ ಪತ್ನಿಯ ಒಂದು ತಿಂಗಳ ತಿಥಿ ಕಾರ್ಯ ಮುಗಿಸಿದ ಮುನಿರಾಜು ಮಗಳನ್ನು ಮಾರನಾಯಕನಹಳ್ಳಿಯಲ್ಲಿರುವ ಪತ್ನಿಯ ತವರು ಮನೆಗೆ ಬಿಟ್ಟು ನಿನ್ನೆ ಸಂಜೆ ಸಮಂದೂರು ಬಳಿಯ ರೈಲ್ವೆ ಹಳಿ ಬಳಿ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ವಿಷಯ ತಿಳಿದು ಸ್ಥಳಕ್ಕಾಗಮಿದ ಮೃತ ವ್ಯಕ್ತಿಯ ಕುಟುಂಬಸ್ಥರ ಅಕ್ರಂದನ ಮುಗಿಲು ಮುಟ್ಟುವಂತಿತ್ತು.ಬಳಿಕ ರೈಲ್ವೆ ಸಿಬ್ಬಂದಿ ಬೈಯ್ಯಪ್ಪನಹಳ್ಳಿ ರೈಲ್ವೆ ಪೋಲಿಸರಿಗೆ ಮಾಹಿತಿ ಮುಟ್ಟಿಸಿದ್ದಾರೆ.

ವರದಿ-ಕಾರ್ತಿಕ್ ಎಕ್ಸ್ ಪ್ರೆಸ್ ಟಿವಿ ಆನೇಕಲ್

Please follow and like us:

Related posts

Leave a Comment