ಶಿಕ್ಷಕರ ದಿನಾಚರಣೆಯ ಅಂಗವಾಗಿ ವಿವೇಕ- ಬ್ರಿಗೇಡ್ ತಂಡದಿಂದ ಔಷಧಿ ಸಿಂಪಡನೆ..!

ಪಾವಗಡ: ಇಂದು ಶಿಕ್ಷಕರ ದಿನಾಚರಣೆ ಅಂಗವಾಗಿ ಪಾವಗಡದ ಗುರುಭವನದಲ್ಲಿ ಶಿಕ್ಷಕರ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿರುವ ಸ್ಥಳಗಳಿಗೆ ವಿವೇಕ- ಬ್ರಿಗೇಡ್ ತಂಡದೊಂದಿಗೆ ಪೂಜ್ಯ ಸ್ವಾಮೀಜಿಯವರು ಗುರುಭವನದ ಒಳಾಂಗಣ ಹಾಗೂ ಹೊರಾಂಗಣದಲ್ಲಿ ಔಷಧಿಯನ್ನು ಸಿಂಪಡಿಸಿ ಹಾಗೂ ನೈರ್ಮಲ್ಯೀಕರಣವನ್ನು ನಡೆಸಿದರು. ಸ್ವಾಮಿ ವಿವೇಕಾನಂದರು ತಿಳಿಸಿದಂತೆ ಶಿಕ್ಷಕರ ಮಹತ್ತರವಾದ ಜವಾಬ್ದಾರಿ ಸೇವೆಗೆ ಪೂರಕವಾಗಿ ತಾವು ಈ ಅಳಿಲು ಸೇವೆಯ ಕೆಲಸವನ್ನು ಮಾಡುತ್ತಿದ್ದೇವೆ ಎಂದು ತಿಳಿಸಿದರು. ಒಟ್ಟಿನಲ್ಲಿ ಪಾವಗಡದ ಸಾರ್ವಜನಿಕ ಪ್ರದೇಶಗಳು, ಬಸ್ ನಿಲ್ದಾಣ, ಮಾರ್ಕೆಟ್, ಬ್ಯಾಂಕ್, ಗುರುಭವನ, ದೇವಸ್ಥಾನ ಹೀಗೆ ಎಲ್ಲ ಪ್ರದೇಶಗಳಲ್ಲಿ ಇನ್ಫೋಸಿಸ್ ಫೌಂಡೇಷನ್ ಸಹಕಾರದೊಂದಿಗೆ ನಿರಂತರವಾಗಿ ಕೋವಿಡ್19 ನಿಯಂತ್ರಣ ಯೋಜನೆಯಲ್ಲಿ ತಮ್ಮನ್ನೇ ತಾವು ತೊಡಗಿಸಿಕೊಂಡು ಅಹರ್ನಿಷಿ ಸ್ವಾಮಿ ವಿವೇಕಾನಂದರ ಧ್ಯೇಯ ವಾಕ್ಯವನ್ನು ಪರಿಪೂರ್ಣವಾಗಿ ಅನುಷ್ಠಾನ ರೂಪಕ್ಕೆ ತರಲು ಹೊರಟಿರುವ ವಿವೇಕ-ಬ್ರಿಗೇಡ್ ಹಾಗೂ ಅದರ ರೂವಾರಿ ಸ್ವಾಮಿ ಜಪಾನಂದಜೀ ರವರ ಈ ಸೇವೆ ನಿರಂತರವಾಗಿ ಪಾವಗಡ ತಾಲ್ಲೂಕಿಗೆ ಹಾಗೂ ಸುತ್ತಮುತ್ತಲ ತಾಲ್ಲೂಕಿಗೆ ದೊರೆಯುವಂತಾಗಲಿ ಎಂದು ಸಾರ್ವಜನಿಕರು ಆಶಿಸುತ್ತಾರೆ.

ವರದಿ: ಇಮ್ರಾನ್ ಎಕ್ಸ್ ಪ್ರೆಸ್ ಟಿವಿ ಪಾವಗಡ…

Please follow and like us:

Related posts

Leave a Comment