ಅಧಿಕಾರಿಗಳ ವಿರುದ್ಧ ಕಿಡಿಕಾರಿದ ಎಂಎಲ್ಸಿ ಅಪ್ಪಾಜಿಗೌಡ…!

ನಾಗಮಂಗಲ: ಶಿಕ್ಷಕರ ದಿನಾಚರಣೆಯ ಆರಂಭ ವಿಳಂಭ ಕುರಿತಾಗಿ ಅಧಿಕಾರಿಗಳ ವಿರುದ್ದ ಎಂಎಲ್ಸಿ ಅಪ್ಪಾಜಿಗೌಡ ಕೆಂಡಮಂಡಲರಾಗಿದ್ದಾರೆ. ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಬೆಳಿಗ್ಗೆ 10:3೦ ಕ್ಕೆ ನಿಗಧಿಯಾಗಿದ್ದ ಕಾರ್ಯಕ್ರಮ.11:40 ಆದರೂ ಆರಂಭವಾಗದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿಗಧಿತ ಸಮಯಕ್ಕೆ ಆಗಮಿಸಿ ಸುಮಾರು 1:15 ಗಂಟೆಗಳ ಕಾಲ ವೇದಿಕೆ ಮುಂಭಾಗದಲ್ಲಿ ಕಾದುಕುಳಿತ್ತಿದ್ದು ಅಪ್ಪಾಜಿಗೌಡ ಕಾರ್ಯಕ್ರಮ ಶುರುಮಾಡದೇ ಶಾಸಕರ ಆಗಮನಕ್ಕಾಗಿ ವಿಳಂಭ ಮಾಡಿದ ಅಧಿಕಾರಿಗಳಿಗೆ ಸಕ್ಕತ್ತ್ ಆಗಿ ಕ್ಲಾಸ್ ತೆಗೆದುಕೊಂಡಿದ್ದಾರೆ.ಮೊದಲು ಬಕೆಟ್ ಹಿಡಿಯುವುದನ್ನು ಬಿಡಿ. ಯಾರೇ ಜನಪ್ರತಿನಿಧಿಯಾಗಿರಲಿ ಅವರಿಗೆ ಬಕೆಟ್ ಹಿಡಿಯದೆ ಎಥಿಕ್ಸ್ ಇಟ್ಟುಕೊಂಡು ಕೆಲಸ ಮಾಡಿ ಎಂದು ಬಿಇಒ ವಿರುದ್ದ ಕಿಡಿಕಾರಿದ್ದು, ಕಾರ್ಯಕ್ರಮ ಆರಂಭ ಮಾಡದಿದ್ದರೆ ಹೊರ ಹೋಗುತ್ತೇನೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಹಸೀಲ್ದಾರ್, ಬಿಇಒ, ತಾ.ಪಂ.ಇಒ ಸೇರಿದಂತೆ ನೆರೆದಿದ್ದ ಎಲ್ಲಾ ಶಿಕ್ಷಕರು ಎಂಎಲ್ಸಿ ಅಪ್ಪಾಜಿಗೌಡರವರ ಆಕ್ರೋಶಕ್ಕೆ ತಬ್ಬಿಬ್ಬಾಗಿದ್ದು, ಮೂಕ ಪ್ರೇಕ್ಷಕರಂತೆ ಜನಪ್ರತಿನಿಧಿಗಳು ನಿಂತಿದ್ದರು.

ವರದಿ- ಎಕ್ಸ್ ಪ್ರೆಸ್ ಟಿವಿ ನಾಗಮಂಗಲ..

Please follow and like us:

Related posts

Leave a Comment