ಮಾಜಿ ಶಾಸಕ ನರೇಂದ್ರಸ್ವಾಮಿಗೆ ತಿರುಗೇಟು ನೀಡಿದ ಮಳವಳ್ಳಿ ಕ್ಷೇತ್ರದ ಶಾಸಕ ಡಾ.ಕೆ ಅನ್ನದಾನಿ..!

ಮಳವಳ್ಳಿ: ನನಗೆ ಎಬಿಸಿಡಿ ಗೊತ್ತಿಲ್ಲ ನಿಜ ನಾನು ಓದಿರುವುದು ಕನ್ನಡ ಲಿಟರೇಚರ್ ಎಂದು ಮಳವಳ್ಳಿ ಕ್ಷೇತ್ರ ಶಾಸಕ ಡಾ. ಕೆ.ಅನ್ನದಾನಿರವರು ಮಾಜಿ ಶಾಸಕ ನರೇಂದ್ರ ಸ್ವಾಮಿಗೆ ತಿರುಗೇಟು ನೀಡಿದ್ದಾರೆ. ಮಳವಳ್ಳಿ ಪಟ್ಟಣದಲ್ಲಿ ಮಳವಳ್ಳಿ ದೊಡ್ಡಕೆರೆಗೆ ಭಾಗಿನ ಅರ್ಪಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಪೂರಿಗಾಲಿ ಏತ ನೀರಾವರಿ ಯೋಜನೆ ಬಗ್ಗೆ ಶಾಸಕರಿಗೆ ಎಬಿಸಿಡಿ ಗೊತ್ತಿಲ್ಲ ಎಂದು ಮಾಜಿ ಶಾಸಕ ಪಿ.ಎಂ ನರೇಂದ್ರಸ್ವಾಮಿ ರವರು ನೀಡಿದ ಹೇಳಿಕೆ ತಿರುಗೇಟು ನೀಡುವುದಲ್ಲದೆ. ನೀವು ತಂದಿರುವ ಯೋಜನೆಗಳನ್ನು ನಾನು ಯಾವುದಾದರೂ ಒಂದನ್ನು ತಡೆದಿದ್ದೇನೆ ಎಂದು ಸಾಬೀತು ಪಡಿಸಿದ್ದರೆ ಕೂಡಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಸವಾಲು ಎಸೆದರು. ಇನ್ನೂ ಕನ್ನಡದ ಪದ ಬಳಕೆ ತಿಳಿಯದೆ ಮಾತನಾಡುವ ನೀವು ಮಳವಳ್ಳಿ ಸುಲ್ತಾನ್ ರಸ್ತೆಯ ಇತಿಹಾಸದ ಬಗ್ಗೆ ಹೇಳಿ ಎಂದು ಮಾಜಿ ಶಾಸಕ ಪಿ. ಎಂ. ನರೇಂದ್ರ ಸ್ವಾಮಿಗೆ ಶಾಸಕ ಡಾ. ಕೆ. ಅನ್ನದಾನಿ ತಿರುಗೇಟು ನೀಡಿದರು.ಶಾಸಕ ಡಾ.ಕೆ. ಅನ್ನದಾನಿ ಮಾಜಿ ಶಾಸಕ ಪಿ.ಎಂ ನರೇಂದ್ರ ಸ್ವಾಮಿ ಅವರಿಗೆ ನಾನು ಶಾಸಕನಾಗುವ ಮೊದಲೇ ನೀವೇನು ಶಾಸಕರು ಆಗಿರಲಿಲ್ಲ. ನಾನು ಕೆಲಸ ಮಾಡಿರುವುದು ಜನರಿಗೆ ಗೊತ್ತಿದೆ ಎಂದರು. ಇನ್ನೂ ಪೂರಿಗಾಲಿ ಹನಿ ನೀರಾವರಿ ಯೋಜನೆಯಲ್ಲಿ ಆ ವಿಷಯಕ್ಕೆ ಸಂಬಂಧಿಸಿದಂತೆ ಎಬಿಸಿಡಿ ತಿಳಿದಿಲ್ಲ ಎಂದು ಹೇಳಿದ್ದಿರಿ ಹೌದು ನನಗೆ ಎಬಿಸಿಡಿ ತಿಳಿದಿಲ್ಲ ನಾನು ಸಾಹಿತ್ಯ ಕ್ಷೇತ್ರವೂ ಓದಿಕೊಂಡು ಬಂದಿರುವವನು ನಾನು ಸಾಹಿತ್ಯದ ಬಗ್ಗೆ ಅರಿವು ನನಗಿದೆ ಕನ್ನಡದ ಪದ ಬಳಕೆ ತಿಳಿಯದೆ ಮಾತನಾಡುತ್ತಿದ್ದೀರಿ ಮಳವಳ್ಳಿ ಸುಲ್ತಾನ್ ರಸ್ತೆಯ ಇತಿಹಾಸ ಹೇಳ್ಬಿಡಿ ಆಗ ಗೊತ್ತಾಗುತ್ತದೆ ಮೊದಲು ಇತಿಹಾಸ ತಿಳಿದುಕೊಂಡು ಮಾತನಾಡಿ ದುರಹಾಂಕಾರದ ಮಾತುಗಳನ್ನು ಆಡುವುದನ್ನು ಬಿಡಿ ಎಂದು ತಿರುಗೇಟು ನೀಡಿದ ಶಾಸಕ ಡಾ.ಕೆ.ಅನ್ನದಾನಿ ಮಾರೇಹಳ್ಳಿ ಕೆರೆ ಮಳವಳ್ಳಿ ದೊಡ್ಡಕೆರೆ ಹೂಳು ಎತ್ತಿಸುವ ಕಾಮಗಾರಿಯಲ್ಲಿ ಗುತ್ತಿಗೆದಾರನ ಜತೆ ಸೇರಿಕೊಂಡು ಒಂದು ಕೆರೆಯಲ್ಲಿ ಹಣ ಮಾಡಿಲ್ಲ ಇದು ಜನರಿಗೆ ಗೊತ್ತಿದೆ ಅಲ್ಪ ಸ್ವಲ್ಪ ಮಣ್ಣು ತೆಗೆಸಿ ತಾಲ್ಲೂಕಿನ ಜನತೆಗೆ ಮೋಸ ಮಾಡಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡರು.ಜನರು ನಿಮ್ಮನ್ನು ಸೋಲಿಸಿ ಮನೆಗೆ ಕಳಿಸಿದ್ದಾರೆ ಮನೆಯಲ್ಲಿ ತೆಪ್ಪಗೆ ಇರಿ ಜನ ನಿಮ್ಮನ್ನು ಆಯ್ಕೆ ಮಾಡಿದಾಗ ಬಂದು ಜನರ ಸೇವೆ ಮಾಡಿ ಅಲ್ಲಿಯವರೆಗೆ ನಮಗೆ ಕೆಲಸ ಮಾಡಲು ಬಿಡಿ ಎಂದು ಮಾಜಿ ಶಾಸಕ ಪಿಎಂ ನರೇಂದ್ರ ಸ್ವಾಮಿ ಅವರಿಗೆ ತಿರುಗೇಟು ನೀಡಿದರು. ಮಾಜಿ ಸಚಿವ ಬಿನ್ ಸೋಮಶೇಖರ್ ಅವರು ನಾಲ್ಕು ಬಾರಿ ಶಾಸಕರಾಗಿ ಎರಡು ಸಾರಿ ಸಚಿವರಾಗಿದ್ದವರು ನಿಟ್ಟೂರು ನೀರಾವರಿ ಯೋಜನೆ ನೆನೆಗುದಿಗೆ ಬಿದ್ದಿತ್ತು ಅದನ್ನು ಎತ್ತಿ ನಿಲ್ಲಿಸಿದವರು ಯಾರು ಎಂದು ಮಾಜಿ ಶಾಸಕ ಬಿ.ಸೋಮ ಶೇಖರ್ ಅವರಿಗೆ ತಿರುಗೇಟು ನೀಡಿದರು .

ವರದಿ- ಎ.ಎನ್ ಲೋಕೇಶ್ ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ

Please follow and like us:

Related posts

Leave a Comment