ನನ್ನ ಪತಿ ವ್ಯಕ್ತಿತ್ವಕ್ಕೆ ಇಂದ್ರಜೀತ್ ಧಕ್ಕೆ ತಂದಿದ್ದಾರೆ- ಮೇಘನಾರಾಜ್ ಆರೋಪ..!

ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ದಿವಂಗತ ನಟ ಚಿರಂಜೀವಿ ಸರ್ಜಾ ಅವರ ಹೆಸರು ತಂದಿದ್ದಕ್ಕಾಗಿ ನಿರ್ದೇಶಕ ಇಂದ್ರಜಿತ್ ಲಂಕೇಶ್ ವಿರುದ್ಧ ಹಲವರು ಬೇಸರ ವ್ಯಕ್ತಪಡಿಸಿದ್ದರು. ಈವರೆಗೂ ಚಿರು ಸರ್ಜಾ ಕುಟುಂಬದವರು ಈ ಬಗ್ಗೆ ಬಹಿರಂಗವಾಗಿ ಮಾತನಾಡಿರಲಿಲ್ಲ. ಆದ್ರೀಗ, ಚಿರು ಸರ್ಜಾ ಪತ್ನಿ ನಟಿ ಮೇಘನಾ ರಾಜ್ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಪತ್ರ ಬರೆದಿದ್ದು, ನನ್ನ ಗಂಡನ ವ್ಯಕ್ತಿತ್ವಕ್ಕೆ ಧಕ್ಕೆ ತಂದಿರುವ ಇಂದ್ರಜಿತ್ ಲಂಕೇಶ್ ಅವರು ಸಾರ್ವಜನಿಕ ಕ್ಷಮೆ ಕೇಳಲಿ ಎಂದು ವಿನಂತಿಸಿಕೊಂಡಿದ್ದಾರೆ. ನನ್ನ ಪತಿ ಚಿರಂಜೀವಿ ಸರ್ಜಾ ನಮ್ಮನ್ನಗಲಿ ಇನ್ನು ಮೂರು ತಿಂಗಳು ಕಳೆದಿಲ್ಲ. ಇಡೀ ನಮ್ಮ ಸಂಸಾರ ಆ ದುಃಖದಿಂದ ಹೊರಬರುವಷ್ಟರಲ್ಲೇ ಆಧಾರ ರಹಿತವಾದ ಆಪಾದನೆಗಳನ್ನು ಮತ್ತು ದುರುದ್ದೇಶಪೂರ್ವಕವಾಗಿ ಹೇಳಿಕೆಗಳನ್ನು ನನ್ನ ಪತಿಯ ಮೇಲೆ ಇಂದ್ರಜಿತ್ ಲಂಕೇಶ್ ವರಿಸುತ್ತಿದ್ದಾರೆ ಇದು ಎಷ್ಟರ ಮಟ್ಟಿಗೆ ಸರಿ. ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ವರದಿ-ನ್ಯೂಸ್ ಡೆಸ್ಕ್ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Please follow and like us:

Related posts

Leave a Comment