ಮಾರುಕಟ್ಟೆ ನವೀಕರಣದ ವಿಚಾರಕ್ಕೆ ಸಚಿವರ ಹಾಗೂ ಸ್ಥಳಿಯರ ನಡುವೆ ಮಾತಿನ ಚಕಮಕಿ!!!

ಹುಬ್ಬಳ್ಳಿ:-ನಗರದ ದುರ್ಗದ ಬೈಲ್ ಹಾಗೂ ಹಳೆ ಹುಬ್ಬಳ್ಳಿ ಮಾರುಕಟ್ಟೆ ನವೀಕರಣದಲ್ಲಿ ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂದು ನಗರಾಭಿವೃದ್ಧಿ ಸಚಿವರ ಮುಂದೆ ಮಾರುಕಟ್ಟೆ ಅಂಗಡಿ ಮಾಲೀಕರು ಮನವಿ ಸಲ್ಲಿಸಿದರು. ಸ್ಮಾರ್ಟ್ ಸಿಟಿ ಯೋಜನೆಯಡಿ ಡಿಪಿಆರ್ ತಯಾರು ಮಾಡುವಾಗ ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ.ಈ ಯೋಜನೆ ಅಡಿ ನವೀಕರಣಕ್ಕಾಗಿ ಸ್ಥಳೀಯರ ಜೊತೆಗೆ ಸಭೆ ಮಾಡದೇ ಏಕಪಕ್ಷೀಯವಾಗಿ ಉಸ್ತುವಾರಿ ಸಚಿವರು ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದಾಗ ಸ್ಥಳಿಯರು ಹಾಗೂ ಸಚಿವರ ಮಧ್ಯ ಮಾತಿನ ಚಕಮಕಿ ನಡೆಯಿತು. ಇನ್ನೂ ಮಾತಿನ ಚಕಿಮಕಿ ನಡೆಯುತಿದ್ದಂತೆ ಪೊಲೀಸರು ಮಧ್ಯ ಪ್ರವೇಶ ಮಾಡಿ ತಿಳಿಗೊಳಿಸಿದರು. ತಮ್ಮ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದಿದ್ದರೇ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.

ವರದಿ-ರಾಜು ಮುದುಗಲ್ ಎಕ್ಸ್ ಪ್ರೆಸ್ ಟಿವಿ ಹುಬ್ಬಳ್ಳಿ

Please follow and like us:

Related posts

Leave a Comment