ಇಂದಿನಿಂದ ಮೆಟ್ರೋ ರೈಲು ಆರಂಭ..ಈ ನಿಯಮ ಪಾಲಿಸಲೇ ಬೇಕಂತೆ..!

ಬೆಂಗಳೂರು :ಮೆಟ್ರೋ ಸಂಚಾರಕ್ಕೆ ಕೇಂದ್ರ ಸರ್ಕಾರ ಹಸಿರು ನಿಶಾನೆ ನೀಡಿದ ಬೆನ್ನಲ್ಲೇ ಇಂದಿನಿಂದ ‘ನಮ್ಮ ಮೆಟ್ರೋ’ ಸಂಚಾರ ನಡೆಸಲಿದೆ.ಲಾಕ್ಡೌನ್ ಮಾಡಿದ ಹಿನ್ನಲೆ ಮಾರ್ಚ್ 22 ರಿಂದ ಮೆಟ್ರೋ ಸಂಚಾರ ಸ್ಥಗಿತ ಮಾಡಲಾಗಿತ್ತು.ಇದೀಗ ಅನ್ಲಾಕ್ 4.0 ಆರಂಭವಾಗಿದ್ದು,ಇಂದಿನಿಂದ ಮೆಟ್ರೋ ಸಂಚಾರ ಮಾಡಲಿದೆ.ಬೆಳಗ್ಗೆ 7 ರಿಂದ 10 ನೇ ತಾರೀಕಿನವರೆಗೆ ನೇರಳೆ ಮಾರ್ಗದಲ್ಲಿ ಬೆಳಗ್ಗೆ 3 ಗಂಟೆ,ಸಂಜೆ 3 ಗಂಟೆಗಳ ಕಾಲ ಮಾತ್ರ ಸಂಚಾರ ನಡೆಸಲಿದೆ.ಸೆಪ್ಟೆಂಬರ್ 9ರಿಂದ ಹಸಿರು ಮಾರ್ಗದಲ್ಲಿ ಮೆಟ್ರೋ ಆರಂಭವಾಗಲಿದೆ. ಬೆಳಗ್ಗೆ 8 ಗಂಟೆಯಿಂದ 11 ಗಂಟೆ ಹಾಗು ಸಂಜೆ 4.30 ರಿಂದ 7.30 ವರೆಗೆ ಮಾತ್ರ ‘ನಮ್ಮ ಮೆಟ್ರೋ’ಸಂಚಾರ ನಡೆಸಲಿದೆ.ಸೆಪ್ಟೆಂಬರ್ 11 ರಿಂದ ಎಲ್ಲಾ ರೈಲು ಬೆಳಗ್ಗೆ 7 ರಿಂದ ರಾತ್ರಿ 9 ರವರೆಗೆ ಎರಡು ಮಾರ್ಗದಲ್ಲಿ ಸಂಚರಿಸಲಿದೆ.
ನಮ್ಮ ಮೆಟ್ರೋ ಷರತ್ತುಗಳು ಏನು?
1. ಮೆಟ್ರೋ ಪ್ರಯಾಣಿಕರಿಗೆ ಸ್ಯಾನಿಟೈಸರ್, ಮಾಸ್ಕ್ ಕಡ್ಡಾಯ
2. ಪ್ರವೇಶ ದ್ವಾರ , ನಿರ್ಗಮನದ, ಹಾಗೂ ಪ್ಲಾಟ್ ಫಾರ್ಮ್ ನಲ್ಲಿ ಗುರುತಿನ ಜಾಗದಲ್ಲಿ ನಿಲ್ಲಬೇಕು
3. ಎಲ್ಲಾ ಪ್ರಯಾಣಿಕರು ಕಡ್ಡಾಯವಾಗಿ 2 ಮೀಟರ್ ಅಂತರ ಕಾಯ್ದುಕೊಳ್ಳಬೇಕು.
4. 50 ಕ್ಕೂ ಹೆಚ್ಚು ಪ್ರಯಾಣಿಕರು ನಿಲ್ದಾಣದಲ್ಲಿ ನಿಲ್ಲುವಂತಿಲ್ಲ
5. ಮೆಟ್ರೋ ರೈಲಿನಲ್ಲಿ 400 ಪ್ರಯಾಣಿಕರಿಗೆ ಮಾತ್ರ ಅವಕಾಶ
6. ರೈಲಿನಲ್ಲಿ ಗುರುತಿಸಿರುವ ಸೀಟ್‌ನಲ್ಲಿ ಮಾತ್ರ ಕೂರಲು ಅವಕಾಶ
7. ಎಲ್ಲಾ ಪ್ರಯಾಣಿಕರಿಗೆ ದೇಹದ ಟೆಂಪರೇಚರ್ ಪರೀಕ್ಷೆ ಮಾಡಲಾಗುತ್ತೆ.
8. ಕಂಟೈನ್ಮೆಂಟ್ ಜೋನ್ ವ್ಯಾಪ್ತಿಯ ಮೆಟ್ರೋ ನಿಲ್ದಾಣಗಳು ಬಂದ್
9. ಕಂಟೈನ್ಮೆಂಟ್ ಜೋನ್ ಗಳ ಮೆಟ್ರೋ ನಿಲ್ದಾಣಗಳಲ್ಲಿ ಮೆಟ್ರೋ ನಿಲ್ಲಿಸಲ್ಲ’

ವರದಿ-ಸುಪ್ರಿಯಾಶರ್ಮಾ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Please follow and like us:

Related posts

Leave a Comment