ಅಕ್ರಮ ಮರಳು ದಂಧೆಗೆ ಬಲಿಯಾದ ಹದಿನೈದು ವರ್ಷದ ಬಾಲಕ..!

ಸಿಂಧನೂರು: ರಾಯಚೂರು ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ ಹೆಗ್ಗಿಲ್ಲದೇ ನಡೆಯುತ್ತಿದೆ.ಈ ದಂಧೆಗೆ ವರ್ಷಕ್ಕೆ ಕನಿಷ್ಟ 3-4 ಕ್ಕೂ ಹೆಚ್ಚು ಸಾವುಗಳು ಜರುಗುತ್ತವೆ. ಈ ದಂದೆಗೆ ಇಂದು ಹದಿನೈದು ವರ್ಷದ ಬಾಲಕ ಬಲಿಯಾದ ಘಟನೆ ನಡೆದಿದೆ.ರಾಯಚೂರು ಜಿಲ್ಲೆಯಲ್ಲಿ ಕೃಷ್ಣ ಮತ್ತು ತುಂಗಭದ್ರ ನದಿಗಳು ಹರಿಯುತ್ತವೆ.ಅದೇ ರೀತಿಯಾಗಿ ಯಥೇಚ್ಚವಾಗಿ ಉತ್ತಮ ಗುಣಮಟ್ಟದ ಮರಳು ಕೂಡ ದೊರೆಯುತ್ತದೆ.ಇದನ್ನೇ ದಂದ್ಧೆಯಾಗಿಸಿಕೊಂಡ ಜಿಲ್ಲೆಯ ಕೆಲ ಪ್ರಭಾವಿಗಳು ಮಾತ್ರ ನದಿಯ ಒಡಲನ್ನು ಬಡಿದು ಬಾಯಿಗೆ ಹಾಕಿಕೊಳ್ಳುತ್ತಿದ್ದಾರೆ.ಈ ಹಿಂದೆ ಇದೇ ಅಕ್ರಮ ದಂದ್ಧೆಗೆ ಅಧಿಕಾರಿಯೊಬ್ಬರ ಮೇಲೆ ಲಾರಿ ಹಾಯಿಸಲಾಗಿತ್ತು. ಜೊತೆಗೆ ಪ್ರತೀ ವರ್ಷ ಕನಿಷ್ಟವೆಂದರೂ ಮೂರು ಬಲಿ ಪಡೆಯುತ್ತಿದೆ ಈ ಮರಳು ಮಾಫಿಯಾ.ಇಂದು ಬೆಳಿಗ್ಗೆ ದ್ವಿಚಕ್ರ ವಾಹನ ಮೂಲಕ ಮನೆಗೆ ಕುಡಿಯುವ ನೀರು ತರಲು ಮೌನೇಶ್(15) ಬಾಲಕ ತೆರಳಿದ್ದ ವೇಳೆ ಅಕ್ರಮ ಮರಳು ತುಂಬಿಕೊಂಡು ತೆರಳುತ್ತಿದ್ದ ಟ್ರಾಕ್ಟರ್ ಒಂದು ಹಿಂಬದಿಯಿಂದ ಬಂದು ದ್ವೀಚಕ್ರ ವಾಹನಕ್ಕೇ ಗುದ್ದಿದ ಪರಿಣಾಮವಾಗಿ ಸ್ಥಳದಲ್ಲೇ ಬಾಲಕ ಸಾವನ್ನಪ್ಪಿದ್ದಾನೆ.ಜಿಲ್ಲೆಯ ಸಿಂಧನೂರು, ದೇವದುರ್ಗ, ರಾಯಚೂರು ತಾಲ್ಲೂಕುಗಳಲ್ಲಿ ಅಕ್ರಮ ಮರಳು ಹೆಗ್ಗಿಲ್ಲದೇ ನಡೆಯುತ್ತಿದ್ರು ಕೇಳುವವರಿಲ್ಲ. ಬಾಲಕನನ್ನು ಕಳೆದುಕೊಂಡು ಪಾಲಕರ ಆಕ್ರಂದನ ಮುಗಿಲು ಮುಟ್ಟಿತ್ತು. ಮೃತ ಬಾಲಕನ ಶವ ಮರಣೋತ್ತರ ಪರೀಕ್ಷೆಗೆ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ತರಲಾಗಿದೆ.ಈ ಕುರಿತು ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಿಲ್ಲೆಗೆ ಹೊಸದಾಗಿ ಆಗಮಿಸಿರುವಂತಹ ಪೊಲೀಸ್ ವರಿಷ್ಟಾಧಿಕಾರಿ ಪ್ರಕಾಶ್ ನಿಕ್ಕಂ ಅವರು ಈ ಅಕ್ರಮ ದಂಧೆಗೆ ಬ್ರೇಕ್ ಹಾಕ್ತಾರ ಎಂದು ಕಾದು ನೋಡಬೇಕಿದೆ.

ವರದಿ-ಸೈಯದ್ ಬಂದೇನವಾಜ್ ಎಕ್ಸ್ ಪ್ರೆಸ್ ಟಿವಿ ಸಿಂಧನೂರು

Please follow and like us:

Related posts

Leave a Comment