ಡಾ.ಬಿಆರ್ ಅಂಬೇಡ್ಕರ್ ಫ್ಲೇಕ್ಸ್ ವಿಚಾರ ಮಳವಳ್ಳಿಯಲ್ಲಿ ದಲಿತ ಮುಖಂಡರುಗಳಿಂದ ಶಾಂತಿ ಸಭೆ…!

ಮಳವಳ್ಳಿ: ಮಹಾನಾಯಕ ಡಾ. ಬಿ.ಆರ್ ಅಂಬೇಡ್ಕರ್ ರವರ ಪ್ಲೇಕ್ಸ್ ಆಳವಡಿಸುವ ವಿಚಾರದಲ್ಲಿ ಜಿಲ್ಲೆಯಲ್ಲಿ ಅಹಿತಕರ ಘಟನೆ ನಡೆದ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳ ಆದೇಶದಂತೆ ತಾಲ್ಲೂಕು ಆಡಳಿತ ವತಿಯಿಂದ ದಲಿತ ಮುಖಂಡರುಗಳು ಶಾಂತಿಸಭೆ ನಡೆಸಲಾಯಿತು. ಮಳವಳ್ಳಿ ಪಟ್ಟಣದ ಮಿನಿವಿಧಾನಸೌದದ ಸಂಕೀರ್ಣ ಕಟ್ಟಡದ ಸಭಾಂಗಣದಲ್ಲಿ ತಹಸೀಲ್ದಾರ್ ಚಂದ್ರಮೌಳಿ ರವರ ಅಧ್ಯಕ್ಷತೆಯಲ್ಲಿ ನಡೆದ ಶಾಂತಿ ಸಭೆಯಲ್ಲಿ ತಾ.ಪಂ ಉಪಾಧ್ಯಕ್ಷ ಮಾಧು ಮಾತನಾಡಿ, ದೇಶಕ್ಕೆ ಸಂವಿಧಾನ ಕೊಟ್ಟ ಅಂಬೇಡ್ಕರ್ ರವರು ಪ್ಲೇಕ್ಸ್ ಯನ್ನೇ ಹಾಕಬಾರದು ಎನ್ನುವುದು ತಪ್ಪು,ಇದು ಸಂವಿಧಾನಕ್ಕೆ ಮಾಡುವ ಅಪಮಾನ ಪ್ಲೇಕ್ಸ್ ಗಳನ್ನು ತೆಗೆಯುವಂತೆ ಜಿಲ್ಲಾಧಿಕಾರಿ ಕ್ರಮ ಸರಿಯಲ್ಲ. ಇದಲ್ಲದೆ ಏಕಾಏಕಿ ಪ್ಲೇಕ್ಸ್ ತೆಗೆಯುವ ಬದಲು ಅನುಮತಿ ಪಡೆಯಲು ಅವಕಾಶ ನೀಡಬೇಕು.ಇದರ ಜೊತೆಗೆ ಮುಂದೆ ಪ್ಲೇಕ್ಸ್ ಹಾಕುವವರೆಗೂ ಯಾವುದೇ ತೊಂದರೆ ನೀಡಬಾರದು.ಆಯಾಯ ಗ್ರಾಮಪಂಚಾಯಿತಿ ,ಪುರಸಭೆಯಲ್ಲಿ ಕಾನೂನು ರೀತಿ ಪಡೆದು ಪ್ಲೇಕ್ಸ್ ಆಳವಡಿಸಿಕೊಳ್ಳಲಿ, ಪ್ರತಿ ಮೂರು ತಿಂಗಳಿಗೊಮ್ಮೆ ಮತ್ತೆ ಅನುಮತಿ ಪಡೆದುಕೊಳ್ಳುವಂತೆ ಅವಕಾಶ ಮಾಡಿಕೊಂಡಬೇಕು. ಎಂದು ಸಭೆಯಲ್ಲಿ ಒತ್ತಾಯಿಸಿದರು.ಬಾಬಸಾಹೇಬರು ಬರೆದಿರುವ ಸಂವಿಧಾನಕ್ಕೆ ಸಾವಿಲ್ಲ.ಮನುಷ್ಯ ತಪ್ಪು ಮಾಡುತ್ತಾನೆ ಅದಕ್ಕಾಗಿ ಪೊಲೀಸ್ ಠಾಣೆ, ಕಾನೂನು ಇರುವುದು.ತಪ್ಪು ಮಾಡಿದರವರೆಗೂ ಶಿಕ್ಷೆ ನೀಡಿ ಎಂದು ಕಿಡಿಕಾಡಿದರು.ಇನ್ನೂ ತಹಸೀಲ್ದಾರ್ ಚಂದ್ರಮೌಳಿ ರವರು ಮಾತನಾಡಿ, ಸಭೆಯಲ್ಲಿ ನಡೆದ ತೀರ್ಮಾನವನ್ನು ಜಿಲ್ಲಾಧಿಕಾರಿಗಳಿಗೆ ಕಳುಹಿಸುತ್ತೇನೆ.ಯಾವುದೇ ಕಾರಣಕ್ಕೂ ಕಾನೂನು ಕ್ರಮ ಕೈಗೆ ಎತ್ತಿಕೊಳ್ಳದೆ.ತಾಲ್ಲೂಕಿನಲ್ಲಿ ಶಾಂತಿಯನ್ನು ಕಾಪಾಡಿಕೊಳ್ಳುವಂತೆ ಕರೆ ನೀಡಿದರು.ಸಭೆಯಲ್ಲಿ ಶಿರಸ್ತೇದಾರ್ ಚನ್ನವೀರಭದ್ರಪ್ಪ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ. ಸುಂದರೇಶ್,ಗ್ರಾಮಾಂತರ ಸರ್ಕಲ್ ಇನ್ಸ್ ಪೆಕ್ಟರ್ ಧನರಾಜ್, ದಲಿತ ಜಾಗೃತಿ ಸಮಿತಿ ದುಗ್ಗನಹಳ್ಳಿನಾಗರಾಜು, ಪ್ರಭು, ಡಾ. ಬಿ.ಆರ್ ಅಂಬೇಡ್ಕರ್ ವಿಚಾರ ವೇದಿಕೆ ಅಧ್ಯಕ್ಷ ಮಹೇಶ್, ಕಾರ್ಯದರ್ಶಿ ಕಾಂತರಾಜು ಸೇರಿದಂತೆ ಮತ್ತಿತ್ತರರು ಇದ್ದರು.

ವರದಿ:ಎ.ಎನ್ ಲೋಕೇಶ್ ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ

Please follow and like us:

Related posts

Leave a Comment