ನಟಿ ಸಂಜನಾ ಗಲ್ರಾನಿಗೆ ಉರುಳಾದ್ರಾ ಆ ಮೂವರು..?

ಬೆಂಗಳೂರು : ಸ್ಯಾಂಡಲ್ವುಡ್ ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ದಿನಕ್ಕೊಂದು ಸ್ಫೋಟಕ ಸತ್ಯ ಹೊರಬರುತ್ತಿದೆ. ಇದೀಗ ಇದೇ ಪ್ರಕರಣದಲ್ಲಿ ನಟಿ ಸಂಜನಾ ಗಲ್ರಾನಿ ಮನೆ ಮೇಲೆ ದಾಳಿ ನಡೆಸಲಾಗಿದೆ. ಆದರೆ ಇದೀಗ ಸಂಜನಾ ಮನೆ ಮೇಲೆ ದಾಳಿಗೆ ಆ ಮೂವರೇ ಕಾರಣ ಅಂತ ಹೇಳಲಾಗುತ್ತಿದೆ.ಇನ್ನು ಸಂಜನಾ ಗಲ್ರಾನಿ ಆಪ್ತ ರಾಹುಲ್, ಪೃಥ್ವಿ ಶೆಟ್ಟಿ ಹಾಗು ಪ್ರಶಾಂತ್ ರಾಂಕ ಹೇಳಿಕೆ ಆಧಾರದ ಮೇಲೆ ಬೆಳ್ಳಂಬೆಳಗ್ಗೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಪೃಥ್ವಿ ಶೆಟ್ಟಿ ಜೊತೆ ಹಲವು ಕಾರ್ಯಕ್ರಮಗಳನ್ನ ಆಯೋಜನೆ ಮಾಡಲಾಗಿತ್ತು ಎನ್ನಲಾಗಿದೆ. ಈಗಾಗಲೇ ಸಿಸಿಬಿ ಅಧಿಕಾರಿಗಳು ಪೃಥ್ವಿ ಶೆಟ್ಟಿರನ್ನ ವಿಚಾರಣೆಗೊಳಪಡಿಸಲಾಗಿದ್ದು, ಸಂಜನಾ ಗಲ್ರಾನಿಗೂ ತಮಗೂ ಇರುವ ಲಿಂಕ್ ಬಗ್ಗೆ ಹೇಳಿರಬಹುದು ಎಂದು ಊಹಿಸಲಾಗಿದೆ. ಅಲ್ಲದೇ ಆಪ್ತ ರಾಹುಲ್ ಡ್ರಗ್ ಪಡ್ಲರ್ ಆಗಿದ್ದು, ತನಿಖೆ ವೇಳೆ ಸಂಜನಾ ಗಲ್ರಾನಿ ಬಗ್ಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಪ್ರಕರಣದ ನಾಲ್ಕನೇ ಆರೋಪ ಹೊತ್ತಿರುವ ಪ್ರಶಾಂತ ರಾಂಕ, ಹೊರ ದೇಶದಿಂದ ಡ್ರಗ್ಸ್ ತರಿಸಿ, ಸಪ್ಲೈ ಮಾಡುತ್ತಿದ್ದ.ಅಲ್ಲದೇ ಪ್ರಶಾಂತ್ ರಾಂಕ ಜೊತೆ ಹಲವು ಬಾರಿ ಪಾರ್ಟಿ ಮಾಡಿದ್ದಾರೆ ಎನ್ನಲಾಗಿದೆ. ಈ ಮೂವರನ್ನ ವಿಚಾರಣೆ ಸಮಯದಲ್ಲಿ ನೀಡಿದ ಹೇಳಿಕೆ ಆಧಾರದ ಮೇಲೆ ನಟಿ ಸಂಜನಾ ಗಲ್ರಾನಿ ಮನೆ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎನ್ನಲಾಗಿದೆ.

ವರದಿ-ಸುಪ್ರಿಯಾಶರ್ಮಾ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Please follow and like us:

Related posts

Leave a Comment