ಪಿರಿಯಾಪಟ್ಟಣದಲ್ಲಿ ಸರಳವಾಗಿ ಶಿಕ್ಷಕರ ದಿನಾಚರಣೆ ಆಚರಣೇ..!

ಪಿರಿಯಾಪಟ್ಟಣ : ಪಿರಿಯಾಪಟ್ಟಣ ತಾಲ್ಲೂಕಿನ ಪುಷ್ಪ ಶಾಲಾ ಆವರಣದಲ್ಲಿ ಶಿಕ್ಷಣ ಇಲಾಖೆ ಹಾಗೂ ಶಿಕ್ಷಕರ ಸಂಘದ ವತಿಯಿಂದ ಸರಳವಾಗಿ ಶಿಕ್ಷಕರ ದಿನಾಚರಣೆ ಹಾಗೂ ಗುರುವಂದನಾ ಕಾರ್ಯಕ್ರಮವನ್ನು ಆಚರಣೆ ಮಾಡಲಾಯಿತು.ಶಿಕ್ಷಕರ ವೃತ್ತಿ ಇತರ ಎಲ್ಲ ವೃತ್ತಿಗಿಂತ ಶ್ರೇಷ್ಠವಾಗಿದ್ದು ಶಿಕ್ಷಕರು ಆದರ್ಶ ವಿಚಾರಗಳಿಂದ ಕೂಡಿದ ಶ್ರೇಷ್ಠ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು. ಕೊವೀಡ್ 19 ನಡುವೆಯೂ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಸತತ 7ನೇ ಬಾರಿಯೂ ಪಿರಿಯಾಪಟ್ಟಣ ತಾಲ್ಲೂಕು ಜಿಲ್ಲೆಯಲ್ಲಿಯೇ ಪ್ರಥಮ ಸ್ಥಾನ ಕಾಯ್ದುಕೊಂಡಿರುವುದರ ಹಿಂದೆ ಶಿಕ್ಷಕರ ಅಪರಿಮಿತ ಶ್ರಮವಿದೆ. ಕ್ಷೇತ್ರ ಶಿಕ್ಷಣಾಧಿಕಾರಿ ವೈ ಕೆ ತಿಮ್ಮೇಗೌಡ ಮಾತನಾಡಿ ಒಂದು ರಾಷ್ಟ್ರವನ್ನು ನಾಶಪಡಿಸಲು ಮದ್ದುಗುಂಡುಗಳ ಅವಶ್ಯಕತೆಯಿಲ್ಲ ಬದಲಾಗಿ ಕಳಪೆ ಶಿಕ್ಷಣ ನೀಡಿದರೆ ಸಾಕು. ಆದುದರಿಂದ ಪ್ರತಿಯೊಬ್ಬ ಶಿಕ್ಷಕನು ಸಮರ್ಪಣಾ ಮನೋಭಾವದಿಂದ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ನೀಡಬೇಕು ಎಂದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಕೌಸಲ್ಯ’ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಕೆ ಆರ್ ನಿರೂಪ ,ಸ್ಥಾಯಿ ಸಮಿತಿ ಅಧ್ಯಕ್ಷ ರಂಗಸ್ವಾಮಿ, ಮೊಹನರಾಜ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಗಣೇಶ್ ಕುಮಾರ್, ಕಾರ್ಯದರ್ಶಿ ಗಾಯತ್ರಿ , ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ಮೋಹನ್ ಕುಮಾರ್ ,ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ರಘುನಾಥ್,ಬಿ.ಆರ್ ಸಿ ಲೋಕೇಶ್’ಪುಷ್ಪ ವಿದ್ಯಾಸಂಸ್ಥೆಯ ಪ್ರಾಂಶುಪಾಲ ಕೆವಿ ಜಾರ್ಜ್ ಶಿಕ್ಷಕರ ಸಂಘದ ಪದಾಧಿಕಾರಿಗಳು ಹಾಜರಿದ್ದರು .

ವರದಿ- ಮಾಗಳಿ ರಾಮೇಗೌಡ ಪಿರಿಯಾಪಟ್ಟಣ

Please follow and like us:

Related posts

Leave a Comment