ಬಿಜೆಪಿ ಸರ್ಕಾರದ ವಿರುದ್ದ ಗುಡುಗಿದ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿ ಮಾಜಿ ಸಚಿವ ಟಿ ಬಿ ಜಯಚಂದ್ರ..!

ಶಿರಾ: ಉಪ ಚುನಾವಣೆ ಮುಂದಿಟ್ಟುಕೊಂಡು ಬಿಜೆಪಿ ಸರ್ಕಾರ ಈಗ ಹಣ ಬಿಡುಗಡೆ ಮಾಡುತ್ತಿರುವುದು ಚುನಾವಣೆ ತಂತ್ರ ಹೊರತು ಜನರ ಮೇಲಿನ ಕಾಳಜಿ ಅಲ್ಲಾ ಎಂದು ಮಾಜಿ ಸಚಿವ ಟಿಬಿ ಜಯಚಂದ್ರ ಆರೋಪಿಸುತ್ತಿದ್ದಾರೆ.ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿ ಮಾಜಿ ಸಚಿವ ಟಿ ಬಿ ಜಯಚಂದ್ರ ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿ ಶಿರಾ ಕ್ಷೇತ್ರದಲ್ಲಿ ಬಾಜಪ ಮುಖಂಡರು ಜನರಲ್ಲಿ ಭ್ರಮೆ ಯನ್ನು ಮೂಡಿಸುವ ಕಾರ್ಯದಲ್ಲಿ ತೊಡಗಿದಾರ ಸರಕಾರ ಅಸ್ತಿತ್ವಕ್ಕೆ ಬಂದು ಒಂದು ವರ್ಷ ಕಳೆದರು ಶಿರಾ ಕ್ಷೇತ್ರವನ್ನು ಗಮನಿಸಿದ ಅವರು ಸದ್ಯ ಇಲ್ಲಿಯ ಶಾಸಕರು ನಿಧನರಾದ ನಂತರ ಕೋಟಿ ಕೋಟಿ ಹಣವನ್ನು ಹರಿಸುವ ಹೇಳಿಕೆ ಗಳನ್ನು ನೀಡುತ್ತಿದ್ದಾರೆ.ಮತ್ತು ಶಿರಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸಾವಿರಾರು ಹಳ್ಳಿಯಲ್ಲಿ ಪ್ರವಾಸಿ ಮಾಡಿರುವ ಹೇಳಿಕೆ ಗಳನ್ನು ನೀಡುವ ಬಾಜಪ ಮುಖಂಡರಿಗೆ ಪ್ರಶ್ನೆ ಮಾಡಿರುವ ಜಯಚಂದ್ರ ಗ್ರಾಮೀಣ ಪ್ರದೇಶಗಳಲ್ಲಿ ಜನರು ಪ್ರಶ್ನೆ ಮಾಡಿರುವ ಉತ್ತರ ಕೊಡಲು ಸಾದ್ಯವಾಗಿಲ್ಲ ವಿಧವೆಯರಿಗೆ.ಮತ್ತು ಅಂಗವಿಕಲರಿಗೆ ಕಳೆದ ಸುಮಾರು ಒಬ್ಬತ್ತು ತಿಂಗಳಿದ ಮಾಸಾಶನ ಬಿಡುಗಡೆ ಮಾಡಲಾಗಿಲ್ಲ ಈ ಬಗ್ಗೆ ಜನರು ಕೇಳುವ ಪ್ರಶ್ನೆಗಳಿಗೆ ಉತ್ತರ ಇಲ್ಲ ಇನ್ನು ದೇವಾಲಯಗಳಿಗೆ ಸಾವಿರಾರು ಕೋಟಿ ಅನುದಾನ ಬಿಡುಗಡೆ ಮಾಡಿರುವ ಹೇಳಿಕೆ ನೀಡುತ್ತಿರುವ ಇವರು ಕ್ಷೇತ್ರದ ಜನತೆಗೆ ಬ್ರಮೇಯನ್ನು ಮೂಡಿಸುವ ಕಾರ್ಯದಲ್ಲಿ ತೊಡಗಿದಾರೆ ಅದರೆ ಕ್ಷೇತ್ರದ ಜನತೆಗೆ ಅನುದಾನ ಎಂದರೆ ಎನ್ನು ಹಾಗೂ ಎಲ್ಲಿದ ಬರುತ್ತದೆ ಎಂದು ತಿಳಿದಿದೆ. ಹಿಂದೆ ಮಂತ್ರಿ ಯಾದ ಸಂದರ್ಭದಲ್ಲಿ ಕ್ಷೇತ್ರದಲ್ಲಿ ಸುಮಾರು ಇಪ್ಪತ್ತು ಕೋಟಿ ಅನುದಾನವನ್ನು ವಿವಿಧ ದೇವಾಲಯ ಮತ್ತು ಸಮುದಾಯದ ಭವನ ಗಳಿಗೆ ಹಣವನ್ನು ಬಿಡುಗಡೆ ಮಾಡಲಾಗಿತ್ತು ಅದರಲ್ಲಿ ಇನ್ನೂ ಕೆಲವು ಅನುದಾನ ಬಿಡುಗಡೆಯಾಗ ಬೇಕಿದೆಎಂದು ಹೇಳಿಕೆ ನೀಡಿರುವ ಜಯಚಂದ್ರ ಬಾಜಪ ನಾಯಕರು ವಿರುದ್ಧ ಮತ್ತು ಸಾರ್ವಜನಿಕ ವಿಚಾರದಲ್ಲಿ ನೀಡುತ್ತಿರುವ ಹೇಳಿಕೆ ಗಳಿಗೆ ತೀಕ್ಷ್ಣವಾಗಿ ಉತ್ತರ ನೀಡಿದ್ದಾರೆ..

ವರದಿ:- ಶ್ರೀಮಂತ್ ಎಕ್ಸ್ ಪ್ರೆಸ್ ಟಿವಿ ಶಿರಾ

Please follow and like us:

Related posts

Leave a Comment