ರಾಜ್ಯದಲ್ಲಿ ಯೂರಿಯಾ ಗೊಬ್ಬರಕ್ಕೆ ಕೊರತೆಯಿಲ್ಲ-ರೈತ ಮೋರ್ಚಾ ಅಧ್ಯಕ್ಷ ಈರಣ್ಣಾ ಕರಡಿ ಹೇಳಿಕೆ…!

ಹುಬ್ಬಳ್ಳಿ: ರಾಜ್ಯದಲ್ಲಿ ಯೂರಿಯಾ ಕೊರತೆಯಿಲ್ಲ ಅದನ್ನು ತಲುಪಿಸುವ ವ್ಯವಸ್ಥೆಯಲ್ಲಿ ವಿಫಲವಾಗಿದೆ ಎಂದು ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ , ಬಿಜೆಪಿ ಸಂಸದ ಈರಣ್ಣಾ ಕರಡಿ ಹೇಳಿದರು.ನಗರದಲ್ಲಿಂದು ಪತ್ರಿಕಾಗೋಷ್ಠಿ ಏರ್ಪಡಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಬೇಡಿಕೆ ಇಟ್ಟ ಪ್ರತಿಶತಕ್ಕಿಂತಲೂ ಶೇ. 10 ರಷ್ಟು ಕೇಂದ್ರ ಯೂರಿಯಾ ಪೂರೈಕೆ ಮಾಡಿದೆ. ಆದರೆ ಕೊರೋನಾ ಹಿನ್ನೆಲೆಯಲ್ಲಿ ಅದನ್ನು ತಲುಪಿಸುವ ವ್ಯವಸ್ಥೆಯಲ್ಲಿ ಸ್ವಲ್ಪ ಅಡೆತಡೆ ಉಂಟಾಗಿವೆ. ಅಲ್ಲದೇ ಈ ಬಾರಿ ಬಿತ್ತನೆ ಭೂಮಿ, ಮಳೆ ಹೆಚ್ಚಾದ ಕಾರಣ ಯೂರಿಯಾ ಕೊರತೆ ಕಂಡುಬಂದಿದೆ ಎಂದರು.ಇನ್ನೂ ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷದ ರೈತ ಮೋರ್ಚಾದ ಹೊಸ ತಂಡ ರಚನೆ ಆಗಿದ್ದು, ರೈತರ ಮತ್ತು ಸರ್ಕಾರದ ಮಧ್ಯೆ ಸಮನ್ವಯ ಸಾಧಿಸಬೇಕೆಂಬ ಉದ್ದೇಶದಿಂದ ರಾಜ್ಯದಾದ್ಯಂತ ಪ್ರವಾಸ ಕೈಕೊಂಡಿದ್ದೇವೆ. ಪ್ರವಾಸಕ್ಕೆ ಅನುಕೂಲವಾಗುವಂತೆ 3-4 ಜಿಲ್ಲೆಗಳನ್ನು ಸೇರಿಸಿ 10 ವಿಭಾಗದ ಮಾಡಿದ್ದು, ಅದರಲ್ಲಿ ಇಂದು ಐದನೇ ದಿನದ ಪ್ರವಾಸವನ್ನು ಧಾರವಾಡ ಜಿಲ್ಲೆಗೆ ಮಾಡಿದ್ದೇವೆ. ಪ್ರವಾಸದ ವೇಳೆ ಸಂಘಟನೆ ಜೊತೆಗೆ ರೈತರೊಂದಿಗೆ ಸಂವಾದ ಮಾಡಿ ಸರ್ಕಾರದ ಯೋಜನೆಗಳನ್ನು ರೈತರಿಗೆ ತಿಳುವಳಿಕೆ ನೀಡುವ ಜೊತೆಗೆ ಅವರ ಸಮಸ್ಯೆಗಳನ್ನು ಆಲಿಸಲಾಗುವುದು.ಅದನ್ನು ಕಾರ್ಯಕಾರಿ ಸಭೆಯಲ್ಲಿ ಚರ್ಚಿಸಿ ಸಂಬಂಧಿಸಿದ ಸಚಿವರಿಗೆ ತಿಳಿಸಲಾಗುವುದು ಎಂದರು.ಪತ್ರಿಕಾಗೋಷ್ಠಿಯಲ್ಲಿ ಈಶ್ವರಗೌಡ ಪಾಟೀಲ, ರವಿ ನಾಯಕ್, ಬಸವರಾಜ ಕುಂದಗೋಳಮಠ ಸೇರಿದಂತೆ ಬಿಜೆಪಿ ರಾಜ್ಯ ರೈತ ಮೋರ್ಚಾ ಪದಾಧಿಕಾರಿಗಳು ಇದ್ದರು. ಬಾಕ್ಸ್ ಹುಬ್ಬಳ್ಳಿ, ಧಾರವಾಡ ಮತ್ತು ಬೆಳಗಾವಿ ರೈಲು ಮಾರ್ಗ ಹುಬ್ಬಳ್ಳಿ, ಕಿತ್ತೂರು ಮತ್ತು ಬೆಳಗಾವಿ ರೈಲು ಮಾರ್ಗ ನಿರ್ಮಾಣ ಆದರೆ ಹೆಚ್ಚು ಸಂಚಾರಕ್ಕೆ ಅನುಕೂಲವಾಗುವುದು ಇದರಿಂದ ಹೆಚ್ಚು ಉದ್ಯೋಗಾವಕಾಶಗಳು, ಇನ್ನಿತರ ಅಭಿವೃದ್ಧಿಗೆ ಸಹಾಯವಾಗಲಿದೆ. ಇನ್ನೂ ಕಾಮಗಾರಿ ಗೆ ರೈತರು ವಿರೋಧ ವ್ಯಕ್ತಪಡಿಸಿದರೆ ಪರ್ಯಾಯ ಮಾರ್ಗದ ಚಿಂತನೆ ಮಾಡಬೇಕೆಂದು ಸಂಗಣ್ಣ ಕರಡಿ ತಿಳಿಸಿದರು.

ವರದಿ-ರಾಜುಮುದುಗಲ್ ಎಕ್ಸ್ ಪ್ರೆಸ್ ಟಿವಿ ಹುಬ್ಬಳ್ಳಿ

Please follow and like us:

Related posts

Leave a Comment