ಹೆಲ್ಮೆಟ್ ಧರಿಸಿ, ಜೀವ ಉಳಿಸಿ, ನಿಲ್ಲಿಸಿ ಭ್ರೂಣ ಹತ್ಯೆ! ಮಹಾತ್ಮಾ ಗಾಂಧೀಜಿ ವೇಷ ಧರಿಸಿ ಜಾಗೃತಿ…!

ಹುಬ್ಬಳ್ಳಿ:-ಹೆಲ್ಮೆಟ್ ಧರಿಸಿ ಅಮೋಲ್ಯವಾದ ಜೀವ ಉಳಿಸಿಕೊಳ್ಳಿ”ಪ್ರತಿಭಟನೆ ನೆಪದಲ್ಲಿ ಸಾರ್ವಜನಿಕ ಆಸ್ತಿ ಪಾಸ್ತಿ ನಾಶಮಾಡಬೇಡಿ.ದುರುದ್ದೇಶದಿಂದ ಇನ್ನೊಬ್ಬರ ಮೇಲೆ ಹಿಂಸೆ ಮಾಡಬೇಡಿ. ಕೊರೊನಾ ಭಯ ಬಿಡಿ ಮಾಸ್ಕ್ ಧರಿಸಿ ಎಂದು ಗದಗ ಜಿಲ್ಲೆ ರೋಣ ತಾಲೂಕಿನ ಕರಕಟ್ಟಿ ಗ್ರಾಮದ ನಿವಾಸಿ ಮುತ್ತಪ್ಪ ತಿರ್ಲಾಪೂರ್ ಸಾರ್ವಜನಿಕರಲ್ಲಿ ಮಹಾತ್ಮ ಗಾಂಧಿಯವರ ವೇಷ ಧರಿಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಹುಬ್ಬಳ್ಳಿಯಿಂದ ದೆಹಲಿಯವರೆಗೆ ಪಾದಯಾತ್ರೆ ಮೂಲಕ ಜನ ಜಾಗೃತಿ ಮೂಡಿಸುತ್ತಿದ್ದಾರೆ.ಮಹಾತ್ಮ ಗಾಂಧೀಜಿಯವರ ವ್ಯಕ್ತಿತ್ವ ಪ್ರಭಾವದಿಂದಾಗಿ ಈ ರೀತಿಯ ಹೆಲ್ಮೇಟ್ ಧರಿಸದೇ ಇರುವುದರಿಂದ ಆಗುವ ಅನಾಹುತ, ಹೆಲ್ಮೆಟ್ ಬಳಕೆ ಮಾಡಿ ಪ್ರಾಣ ಉಳಿಸಿಕೊಳ್ಳುವ ಕುರಿತು ಮತ್ತು ಪ್ರತಿಭಟನೆ, ಧರಣಿ ನೆಪದಲ್ಲಿ ಸಾರ್ವಜನಿಕ ಆಸ್ತಿ ಪಾಸ್ತಿ ಹಾಳು ಮಾಡುವುದರಿಂದ ಆಗುವ ಅನಾಹುತು ಭ್ರೂಣ ಹತ್ಯೆ ನಿಲ್ಲಿಸಿ ಎಂದು ಗಾಂಧಿಜೀಯವರ ವೇಷಧಾರಿ ಪಾದಯಾತ್ರೆ ಬೈಕ್ ಸವಾರರು ಹಾಗೂ ಸಾರ್ವಜನಿಕರಿ ಮೂಲಕ ಜಾಗೃತಿ ಮೂಡಿಸುತಿದ್ದಾರೆ. ನಗರದ ಚೆನ್ನಮ್ಮನ ಸರ್ಕಲ್, ಬಸ್ ನಿಲ್ದಾಣ, ರೇಲ್ವೆ ನಿಲ್ದಾಣ ಸೇರಿದಂತೆ ನಗರದ ಪ್ರಮುಖ ವೃತ್ತದಲ್ಲಿ ಸಂಚಾರಿ ಜಾಗೃತಿ ಮೂಡಿಸುತಿದ್ದಾರೆ.

ವರದಿ-ಎ.ಎನ್ ಲೋಕೇಶ್ ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ

Please follow and like us:

Related posts

Leave a Comment