20 ವರ್ಷಗಳ ಬಳಿಕ ಕೆಸಿ ವ್ಯಾಲಿ ನೀರು ಹರಿದು ತುಂಬಿ ತುಳುಕುತ್ತಿದೆ ಕೆರೆ..!

ಕೋಲಾರ: ಕೋಲಾರ ತಾಲ್ಲೂಕಿನಲ್ಲಿರುವ ಅತೀ ದೊಡ್ಡ ಸಾವಿರ ಎಕರೆ ವಿಸ್ತೀರ್ಣ ಹೊಂದಿರುವ ಎಸ್ ಆಗ್ರಹಾರ ಕೆರೆಯಲ್ಲಿ 20 ವರ್ಷದ ನಂತರ ಕೆಸಿ ವ್ಯಾಲಿ ನೀರು ಹರಿದು ತುಂಬಿ ತುಳುಕುತ್ತಿದೆ. ಸುಮಾರು 1100 ಎಕರೆಯಷ್ಟು ವಿಸ್ತೀರ್ಣ ಹೊಂದಿರುವ ಜಿಲ್ಲೆಯ ದೊಡ್ಡ ಕೆರೆ ಇದಾಗಿದ್ದು, ಕೆರೆ ತುಂಬಿ ಕೋಡಿ ಹೋದ ಹಿನ್ನೆಲೆ ಕೆರೆ ವೀಕ್ಷಿಸಲು ಸಾವಿರಾರು ಜನರು ಬರುತ್ತಿದ್ದಾರೆ. ಕಳೆದ 5 ದಿನಗಳಿಂದ ಸುರಿಯುತ್ತಿರುವ ಮಳೆ ಹಾಗೂ ಕೆಸಿವ್ಯಾಲಿ ನೀರು ಹರಿದ ಹಿನ್ನೆಲೆ 20 ವರ್ಷಗಳ ನಂತರ ಸುತ್ತಮುತ್ತಲಿನ ಗ್ರಾಮದ ಜನರು ಕೆರೆ ತುಂಬಿರುವುದನ್ನು ನೋಡಿ ಖುಷಿ ಪಡುತ್ತಿದ್ದು ಅವರ ಸಂತೋಷಕ್ಕೆ ಪಾರಾವೇ ಇಲ್ಲದಂತಾಗಿದೆ..

ವರದಿ-ಬೆಟ್ಟಪ್ಪ ೆಕ್ಸ್ ಪ್ರೆಸ್ ಟಿವಿ ಕೋಲಾರ

Please follow and like us:

Related posts

Leave a Comment