ಎಸ್ಎಸ್ಎಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಸನ್ಮಾನ..!

ಮಳವಳ್ಳಿ: ಭಾರತೀಯ ವಿದ್ಯಾರ್ಥಿ ಸಂಘ ಮತ್ತು ಕರ್ನಾಟಕ ವಿಕಾಸ ಪರಿಷತ್ತು ವತಿಯಿಂದ 2019- 20 ನೇ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ. ಮತ್ತು ಸನ್ಮಾನ ಸಮಾರಂಭ ಮಳವಳ್ಳಿ ತಾಲ್ಲೂಕಿನ ಮತ್ತಿತಾಳೇಶ್ವರ ದೇವಸ್ಥಾನದ ಬಳಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ನಡೆಸಲಾಯಿತು. ಕಾರ್ಯಕ್ರಮವನ್ನು ನವದೆಹಲಿ ಐಎಎಸ್ ತರಭೇತಿದಾರ ಡಾ. ದೇವರಾಜು ಒಡೆಯರ್ ಉದ್ಘಾಟಿಸಿದರು. ಇನ್ನೂ ನವದೆಹಲಿಯ ಅಕ್ಕ ಐಎಎಸ್ ಅಕಾಡೆಮಿ ನಿರ್ದೇಶಕ ಹಾಗೂ ಐಎಎಸ್ ತರಭೇತಿದಾರ ಡಾ. ಶಿವಕುಮಾರ ಮಾತನಾಡಿ, ಕೇವಲ ಸಣ್ಣ ಮಟ್ಟದ ಶಿಕ್ಷಣ. ಪಡೆಯದೆ ಉನ್ನತ ಮಟ್ಟದ ಶಿಕ್ಷಣ ಪಡೆಯುವ ಬಗ್ಗೆ ಯೋಚನೆ ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಎಸ್ ಎಸ್ ಎಲ್ ಸಿ , ಪಿಯುಸಿ ಪಾಸಾದ ತಕ್ಷಣ ಡಾಕ್ಟರ್, ಇಂಜಿನಿಯರ್ ಆಗಬೇಕು ಎಂಬ ಆಲೋಚನೆ ಬರುತ್ತದೆ. ಇದು ಎಲ್ಲರೂ ಮಾಡುತ್ತಾರೆ ಆದರೆ ಕೇಂದ್ರಸರ್ಕಾರ ಹಲವು ಪರೀಕ್ಷೆಗಳ ವಿದ್ಯಾರ್ಥಿಗಳಿಗೆ ನೀಡುತ್ತಿದೆ. ಅದು ನಿಮಗೆ ಗೊತ್ತಿಲ್ಲ ಅದರಲ್ಲೂ ಐಎಎಸ್, ಐಪಿಎಸ್ ಪರೀಕ್ಷೆಗಳನ್ನು ತೆಗೆದುಕೊಂಡರೆ ಜಿಲ್ಲಾಧಿಕಾರಿ, ವರಿಷ್ಠಾಧಿಕಾರಿ ಆಗಬಹುದು. ಈ ನಿಟ್ಟಿನಲ್ಲಿ ನಿಮ್ಮ ಯೋಚನೆಗಳನ್ನು ಮಾಡಬೇಕು ಎಂದರು. ಇನ್ನೂ ಇದೇ ವೇಳೆ 2019- 20 ನೇ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಯಲ್ಲಿ ತೇರ್ಗಡೆಯಾದ ಸುಮಾರು 43 ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಸರ್ಕಾರಿ ಪ್ರೌಢಶಾಲಾ ಪ್ರಭಾರ ಮುಖ್ಯ ಶಿಕ್ಷಕ ಅನೀಸ್ ಅಹಮದ್, ಗ್ರಾ.ಪಂ ಮಾಜಿ ಅಧ್ಯಕ್ಷ ಕುಳ್ಳಚನ್ನಂಕೇಗೌಡ, ಚೆನ್ನಿಗರಾಮು,ನಂಜುಂಡಸ್ವಾಮಿ, ಮಹದೇವಸ್ವಾಮಿ, ಅಶೋಕ,ಸೇರಿದಂತೆ ಮತ್ತಿತ್ತರರು ಇದ್ದರು.

ವರದಿ-ಎ.ಎನ್ ಲೋಕೇಶ್ ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ

Please follow and like us:

Related posts

Leave a Comment