ದಿನದಿಂದ ದಿನಕ್ಕೆ ತಾರಕಕ್ಕೇರುತ್ತಿರುವ ಗ್ರಾ.ಪಂ.ಚುನಾವಣೆಯ ಕಾವು…!

ನಾಗಮಂಗಲ: ಜನಪ್ರತಿನಿಧಿಗಳ ಅಧಿಕಾರವಧಿ ಪೂರ್ಣಗೊಂಡ ಹಿನ್ನಲೆಯಲ್ಲಿ ಸರ್ಕಾರ ನೇಮಿಸಿರುವ ಆಡಳಿತಾಧಿಕಾರಿಗಳ ಅವಧಿಯೂ ನಿಯಮಾನುಸಾರ ಪೂರ್ಣಗೊಳ್ಳುವುದರೊಳಗೆ ಚುನಾವಣೆ ನಡೆಸುವುದು ಅನಿವಾರ್ಯ.ಈ ನಿಟ್ಟಿನಲ್ಲಿ ಮೀಸಲಾತಿ ಪ್ರಕ್ರಿಯೆ ಹಾಗೂ ಮತದಾರ ಕರಡು ಪಟ್ಟಿ ಪ್ರಕಟಣೆ ಸೇರಿದಂತೆ ಚುನಾವಣೆ ನಡೆಸಲು ಅಗತ್ಯ ಕ್ರಮಗಳು ಚಾಲ್ತಿಯಲ್ಲಿರುವ ಹಿನ್ನಲೆಯಲ್ಲಿ ಗ್ರಾಮ ಪಂಚಾಯ್ತಿ ಚುನಾವಣೆಯ ಸ್ಪರ್ಧಕಾಕ್ಷಿಗಳ ಕಸರತ್ತಿನ ಕಾವು ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮತ್ತು ಕೈಬಿಡುವ ಕಸರತ್ತಿನ ಅಂತಿಮ ಪ್ರಯತ್ನಕ್ಕೆ ಹಾಲಿ ಮತ್ತು ಮಾಜಿ ಶಾಸಕರ ಬಣದ ಆರೋಪ-ಪ್ರತ್ಯಾರೋಪಗಳ ಜಟಾಪಟಿ ತಹಸೀಲ್ದಾರ್ ಕಚೇರಿವರೆಗೂ ವ್ಯಾಪಿಸಿದೆ. ತಾಲ್ಲೂಕಿನ ತುಪ್ಪದಮಡು ಗ್ರಾ.ಪಂ. ವ್ಯಾಪ್ತಿಯ ತುಪ್ಪದಮಡು ಗ್ರಾಮದಲ್ಲಿನ ಮತದಾರರ ಪಟ್ಟಿಯ ಹೆಸರು ಸೇರ್ಪಡೆಗೆ ಹಾಲಿ ಶಾಸಕ ಸುರೇಶ್ ಗೌಡ್ರು ವಿರೋಧ ವ್ಯಕ್ತಪಡಿಸಿದ್ದಾರೆ ಎಂಬ ಆರೋಪದ ಹಿನ್ನಲೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಪ್ರಸನ್ನ ನೇತೃತ್ವದ ಮಾಜಿ ಶಾಸಕ ಎನ್.ಚೆಲುವರಾಯಸ್ವಾಮಿ ಬೆಂಬಲಿತ ತಂಡ ತಹಸೀಲ್ದಾರ್ ಕುಂಞ ಅಹಮ್ಮದ್ ರವರನ್ನು ಭೇಟಿ ಮಾಡುವ ಮೂಲಕ ತಮ್ಮ ಅಹವಾಲು ಸಲ್ಲಿಸುವ ಮೂಲಕ ಕಾನೂನು ವ್ಯಾಪ್ತಿಯ ತಮ್ಮ ಕರ್ತವ್ಯಕ್ಕೆ ನಮ್ಮ ಬೆಂಬಲವಿದೆ. ಯಾರಿಗೂ ನೀವು ಹೆದರುವ ಅಗತ್ಯವಿಲ್ಲ ನಿಮ್ಮೊಟ್ಟಿಗೆ ನಾವಿದ್ದೇವೆ ಎಂದು ಮನವಿ ಮಾಡಿದರು.ಈ ಬಗ್ಗೆ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಪ್ರಸನ್ನ, ತಮ್ಮ ಶಾಸಕ ಸ್ಥಾನದ ಗೌರವ ತಿಳಿಯದ ಶಾಸಕ ಸುರೇಶ್ ಗೌಡರಿಗೆ ನಾಚಿಕೆಯಾಗಬೇಕು. ನಾನು ವಿದ್ಯಾವಂತ ಶಾಸಕ ಎಂದು ಹೇಳ್ಕೊತ್ತಾರೆ, ವಾಸದ ಮನೆ, ಪಡಿತರ ಚೀಟಿ ಹೊಂದಿರುವವರ ಹೆಸರು ಸೇರ್ಪಡೆಗೆ ವಿರೋಧಿಸುವುದು ಅವರ ಕನಿಷ್ಠ ಪ್ರಜ್ಞೆಯನ್ನು ತೋರಿಸುತ್ತದೆ.ಅವರ ಹೆಸರೇನಾದರೂ ಸೇರ್ಪಡಿಸಿದರೆ ಪ್ರತಿಭಟನೆಯ ಹೋರಾಟ ಮಾಡುವುದಾಗಿ ತಹಸೀಲ್ದಾರ್ ಗೆ ಬೆದರಿಕೆ ಹಾಕ್ತಾರೆ. ತಾಕತ್ತಿದ್ದರೆ ಹೋರಾಟಕ್ಕೆ ಬನ್ನಿ. ನೀವು ಒಂದು ಸಾವಿರ ಜನ ಸೇರಿಸಿದರೆ ನಾವು ಎರಡು ಸಾವಿರ ಜನ ಸೇರಿಸುತ್ತೇವೆ. ತಾಲ್ಲೂಕಿನಲ್ಲಿ ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಸೋತಿರಬಹುದು, ಆದರೆ ಸತ್ತಿಲ್ಲ ಎಂದು ಶಾಸಕರ ವಿರುದ್ದ ಹರಿಹಾಯ್ದರು.

ವರದಿ-ಎಸ್.ವೆಂಕಟೇಶ್.ಎಕ್ಸ್ ಪ್ರೆಸ್ ಟಿವಿ ನಾಗಮಂಗಲ.

Please follow and like us:

Related posts

Leave a Comment