ಕೂಡ್ಲಿಗಿ ತಾಲ್ಲೂಕಿನಲ್ಲಿ ಗಾಂಜಾ ವಶ- ಭರ್ಜರಿ ಭೇಟೆಯಾಡಿದ ಗುಡೆಕೋಟೆ ಪಿಎಸ್ಐ ರಾಮಪ್ಪ..!

ಕೂಡ್ಲಿಗಿ ತಾಲೂಕಿನ ಗುಡೆಕೋಟೆ ಪೊಲೀಸ್ ಠಾಣಾ ವ್ಯಾಪ್ತಿಗೆ ಸೇರಿದ ಸಂಡೂರು ತಾಲೂಕಿನ ಮತ್ತಜನಲ್ಲಿ ಗ್ರಾಮದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದಾರೆಂಬಾ ಗುಮಾನಿ ಮೇರೆಗೆ ಕೂಡ್ಲಿಗಿ ಡಿವೈಎಸ್ಪಿ ಜಿ. ಹರೀಶ್ ಅವರ ಮಾರ್ಗದರ್ಶನದಂತೆ ಸಂಡೂರು ತಾಲೂಕಿನ ಮತ್ತಜನಲ್ಲಿ ಗ್ರಾಮದಲ್ಲಿ 16ಕೆ.ಜಿ ಗಾಂಜವನ್ನು ಪೋಲಿಸರು ವಶಪಡಿಸಿಕೊಂಡಿದ್ದಾರೆ. ಈ ವೇಳೆ ಆರೋಪಿ ಕವಾಲಿ ಪಾಪಣ್ಣ ಪರಾರಿಯಾಗಿದ್ದು, ಆರೋಪಿಯ ಶೋದಕ್ಕಾಗಿ ಪೋಲಿಸರು ಬಲೆಬಿಸಿದ್ದಾರೆ. ಗುಡೆಕೋಟೆ ಪೊಲೀಸ್ ಠಾಣೆಯಲ್ಲಿ ಈ ಇಂದೇ ಅನೇಕ ಅಕ್ರಮಗಳು ನಡೆಯುತ್ತಿದ್ದವು ಆದರೆ ಇತ್ತೀಚೆಗೆ ಬಂದ ರಾಮಪ್ಪ ಅನ್ನೋ ದಕ್ಷ ಅಧಿಕಾರಿ ಪ್ರತಿ ಹಳ್ಳಿಗಳಿಗೆ ಭೇಟಿ ನೀಡಿ ಮರಳು, ಇಸ್ಪೀಟ್, ಮಟ್ಕಾ ಯಾವುದೇ ದಂದೇಗಳು ಕಂಡುಬಂದರೆ ನಮ್ಮ ಠಾಣೆಗೆ ತಿಳಿಸಿ ಅವರ ಮೇಲೆ ಕ್ರಮ ಕೈಗೊಳ್ಳುತ್ತೇನೆ ಹಾಗೂ ಸಾರ್ವಜನಿಕರಿಗೆ ಸಾಮಾಜಿಕ ಜವಾಬ್ದಾರಿ ಇದೆ ನೀವು ಇದಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದರು. ರಾಮಪ್ಪನವರಿಗೆ ಠಾಣೆಯ ಎಲ್ಲಾ ಸಿಬ್ಬಂದಿ ವರ್ಗದವರು ಜೊತೆಗೂಡಿ ಸಹಕಾರ ನೀಡುತ್ತಿದ್ದಾರೆ. ಇಂತಹ ಪೊಲೀಸ್ ಅಧಿಕಾರಿ ನಮಗೆ ಸಿಕ್ಕಿರುವುದು ನಮಗೆ ತುಂಬಾ ಸಂತಸ ಎಂದು ಸಾರ್ವಜನಿಕರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ವರದಿ-ನಂದೀಶ್ ನಾಯಕ ಎಕ್ಸ್ ಪ್ರೆಸ್ ಟಿವಿ

Please follow and like us:

Related posts

Leave a Comment