ಜಯಚಂದ್ರ ಕರೆಯಬೇಕೆಂದು ಯಾವುದೇ ಪ್ರೋಟೊಕಾಲ್ ಇಲ್ಲ- ಆರ್ ಅಶೋಕ್..!

ತುಮಕೂರು : ಮಿನಿ ವಿಧಾನಸೌಧ ಉದ್ಘಾಟನೆಗೆ ಜಯಚಂದ್ರ ಕರೆಯಬೇಕೆಂದು ಯಾವುದೇ ಪ್ರೊಟೊಕಾಲ್ ಇಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ. ತುಮಕೂರಿನ ಶಿರಾ ಪಟ್ಟಣದಲ್ಲಿ ಮಿನಿ ವಿಧಾನಸೌಧ ಉದ್ಘಾಟಿಸಿ ಮಾತನಾಡಿದ, ಅಶೋಕ್, ಕಟ್ಟಡ ಉದ್ಘಾಟನೆ ರೋಟಿನ್ ಪ್ರೋಸಸ್, ಜಯಚಂದ್ರ ಎಂಎಲ್ಎ ಅಲ್ಲಾ, ಪ್ರೊಟೋಕಾಲ್ ಪ್ರಕಾರ ಏನು ಅಲ್ಲಾ. ನಮ್ಮ ಸರ್ಕಾರ ಇದ್ದಾಗ ಹಲವು ಬಸ್ ನಿಲ್ದಾಣ ನಿರ್ಮಾಣ ಮಾಡಿದ್ವಿ, ಆವಾಗ ಕಾಂಗ್ರೆಸ್ ಸರ್ಕಾರ ಉದ್ಘಾಟನೆ ಮಾಡಿದ್ರು. ಜಯಚಂದ್ರ ಅವರು ಕಾನೂನು ಸಚಿವರಾಗಿದ್ದರು, ಕಾನೂನೆಲ್ಲಾ ಅವರಿಗೆ ಗೊತ್ತಿದೆ ಎಂದು ತಿಳಿಸಿದ್ರು. ಇನ್ನು ಶಿರಾ ಉಪಚುನಾವಣೆ ಹಿನ್ನೆಲೆ ದೇವಾಲಯಕ್ಕೆ ಹಣ ಬಿಡುಗಡೆ ಮಾಡಿದ ವಿಚಾರಕ್ಕೆ ಮಾತನಾಡಿದ ಅವರು, ನಾನು ಪೊಲಿಟಿಕಲ್ ಮಾತನಾಡುವುದಿಲ್ಲ. ಎಲ್ಲಾ ಸರ್ಕಾರ ಏನೇನ್ ಮಾಡಿದೆ ನಾವು ಅದನ್ನೇ ಮಾಡ್ತಾ ಇದ್ದೇವೆ. ರಾಜ್ಯಾದಲ್ಲಿ ಡ್ರಗ್ಸ್ ವಿಚಾರ ದಿನೇ ದಿನೇ ತಿರುವುಗಳನ್ನು ಪಡೆದುಕೊಳ್ತಾಯಿದೆ.ನಮ್ಮ ಗೃಹಸಚಿವರು ಸಮರ್ಥರಿದ್ದಾರೆ, ಎಲ್ಲವನ್ನೂ ಜಾಲಾಡ್ತಾ ಇದ್ದಾರೆ.ಸಮರ್ಥವಾಗಿ ಹಿಂದಿನ ಸರ್ಕಾರ ಏನು ಕ್ರಮ ಕೈಗೊಳ್ಳಬೇಕಿತ್ತೋ ಅದನ್ನ ಮುಂದುವರಿಸಿ ಕೆಲಸ ಮಾಡ್ತಾ ಇದ್ದಾರೆ. ಡ್ರಗ್ಸ್ ದಂದೇಯಲ್ಲಿ ರಾಜಕೀಯದವರ ಮಕ್ಕಳಿರೋದು ಕಂಡು ಬಂದಿಲ್ಲ.ಯಾರೇ ಇದ್ದರೂ ಕಾನೂನು ಕ್ರಮ ಕೈಗೊಳ್ತೇವೆ, ಕಾನೂನು ಎಲ್ಲರಿಗೂ ಒಂದೇ.ನಾನು ಯಾರ ಹೆಸರು ಹೇಳೋಕೆ ಇಷ್ಟ ಪಡೋಲ್ಲ.ಸರ್ಕಾರ ನಿಷ್ಪಕ್ಷಪಾತವಾಗಿ ಕೆಲಸ ಮಾಡ್ತೀದೆ. ನಮಗೆ ಗಿಮಿಕ್ ಮಾಡಿ ಅಭ್ಯಾಸ ಇಲ್ಲ ದೇಶದಲ್ಲೇ ಕಾಂಗ್ರೆಸ್ ಕಾಣೆಯಾಗಿದೆ ಮೊದಲು ಅವರ ಪಾರ್ಟಿಗೆ ಅಧ್ಯಕ್ಷರ ನೇಮಕ ಮಾಡಲಿ ಆಮೇಲೆ ಬೇರೆಯವರಿಗೆ ಬುದ್ದಿ ಮಾತು ಹೇಳಲಿ ಎಂದು ಆರ್ ಅಶೋಕ್ ಗುಡುಗಿದ್ದಾರೆ.

ವರದಿ-ಶ್ರೀಮಂತ್ ಎಕ್ಸ್ ಪ್ರೆಸ್ ಟಿವಿ ಶಿರಾ

Please follow and like us:

Related posts

Leave a Comment