ಆನೇಕಲ್ ನಲ್ಲಿ ಒಂಟಿ ಮಹಿಳೆಯ ಬರ್ಬರ ಹತ್ಯೆ..!

ಆನೇಕಲ್: ನಿನ್ನೆ ರಾತ್ರಿ ಎಂಟು ಘಂಟೆಯ ಸಮಯ ಸುತ್ತ ಮುತ್ತ ಬೆರಳೆಣಿಕೆಯಷ್ಟು ಮಾತ್ರ ಮನೆಗಳು.ಇನ್ನೇನು ಊಟ ಮುಗಿಸಿ ಮಲಬೇಕಾಗಿದ್ದ ಸಮಯ ಅದು ಆದ್ರೆ ಆ ಮನೆಗೆ ಒಂದು ಡಕಾಯಿತಿ ಗ್ಯಾಂಗ್ ಎಂಟ್ರಿ ಕೊಟ್ಟಿತ್ತು, ಕೇವಲ ಚಿನ್ನ ಮತ್ತು ಹಣದ ಆಸೆಯಿಂದಾಗಿ ಒಂದು ಜೀವವನ್ನೆ ಬಲಿ ತೆಗೆದುಕೊಂಡಿರುವ ಘಟನೆ ಆನೇಕಲ್ ತಾಲೂಕಿನ ಸಿಂಗೇನ ಅಗ್ರಹಾರ ಬಳಿಯ ದೀಪಹಳ್ಳಿಯಲ್ಲಿ ನಡೆದಿದೆ. ಫೋಟೋದಲ್ಲಿರುವ ಈ ಮಹಿಳೆಯೆ ಮೃತ ದುರ್ದೈವಿ ಹೆಸರು ಶ್ವೇತಾ, ಕಳೆದ ಆರು ವರ್ಷಗಳ ಹಿಂದೆ ಮುರಳಿ ಎಂಬಾತನನ್ನು ಮದುವೆ ಮಾಡಿಕೊಂಡು ಸಂಸಾರ ನಡೆಸುತ್ತಿದ್ದಳು ಆದ್ರೆ ನಿನ್ನೆ ರಾತ್ರಿ ಇದ್ದಕ್ಕಿದ್ದಂತೆ ಇವರ ಮನೆಗೆ ಎಂಟ್ರಿ ಕೊಟ್ಟಿದ್ದ ಆ ಗ್ಯಾಂಗ್ ಒಂದು ಚಿನ್ನಾಭರಣವನ್ನು ಹಣ ಮತ್ತು ಮಾಂಗಲ್ಯ ಸರ ಕಳ್ಳತನ ಮಾಡಿ ಈಕೆಯನ್ನು ಬರ್ಭರವಾಗಿ ಹತ್ಯೆ ಮಾಡಿ ಪರಾರಿಯಾಗಿದೆ. ಗುರುವಾರ ರಾತ್ರಿ ಒಂಬತ್ತು ಘಂಟೆಯ ಸಮಯ ಮನೆಯಲ್ಲಿ ಶ್ವೇತಾ ಒಬ್ಬಳೆ ಇದ್ದಳು. ಗಂಡ ಮುರಳಿ ಆನೇಕಲ್ ತಾಲ್ಲೂಕಿನ ಚಂದಾಪುರದಲ್ಲಿ ಮೆಡಿಕಲ್ ಶಾಪ್ ಒಂದರಲ್ಲಿ ಕೆಲಸ ಮಾಡುತ್ತಿದ್ದಾನೆ.ಇನ್ನು ಆಕೆಯ ಅತ್ತೆ ಮತ್ತು ಮಗ ನಿನ್ನೆ ಮೂರು ಘಂಟೆಯ ಸುಮಾರಿಗೆ ಬೇರೆ ಊರಿಗೆ ತೆರಳಿದ್ದಾರೆ. ಹೀಗಾಗಿ ರಾತ್ರಿ ಗಂಡನನ್ನು ಕಾಯುತ್ತ ಮನೆಯಲ್ಲಿ ಈ ಶ್ವೇತಾ ಒಬ್ಬಳೆ ಇದ್ದಾಳೆ ಇದನ್ನು ಅರಿತಿದ್ದ ಗ್ಯಾಂಗ್ ಒಂದು ಸ್ಕೆಚ್ ಹಾಕಿ ಮನೆಗೆ ಎಂಟ್ರಿ ಕೊಟ್ಟಿದೆ ನಂತರ ಮನೆಯಲ್ಲಿದ್ದ ಶ್ವೇತಾಳಿಗೆ ಹಲ್ಲೆ ಮಾಡಿದ್ದಾರೆ. ನಂತರ ಒಡವೆ,ಹಣವನ್ನು ದೋಚುವುದಕ್ಕೆ ಶುರು ಮಾಡಿದ್ದಾರೆ ಆಗ ಶ್ವೇತಾ ಕೂಗೂವುದಕ್ಕೆ ಶುರುಮಾಡಿದ್ದಾಳೆ. ಆಗ ತಮ್ಮ ಬಳಿಯಿದ್ದ ಚಾಕುವಿನಿಂದ ಶ್ವೇತಾಳ ಎದೆ ಭಾಗಕ್ಕೆ ಚುಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಕೆಲ ನಿಮಿಷಗಳ ನಂತರ ಸ್ಥಳೀಯರಿಗೆ ಕೊಲೆಯಾಗಿರುವುದರ ಬಗ್ಗೆ ಮಾಹಿತಿ ಸಿಕ್ಕಿದ್ದು, ತಕ್ಷಣವೇ ಹೆಬ್ಬಗೋಡಿ ಪೊಲೀಸರಿಗೆ ದೂರು ನೀಡಿದ್ದಾರೆ.ಪೊಲೀಸರು ಸಹ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ನಂತರ ಶ್ವಾನ ದಳವನ್ನು ಸಹ ಕರೆಸಿ ಪರಿಕ್ಷೆ ಮಾಡಿಸಿ ಇದೀಗ ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಆನೇಕಲ್ ಡಿವೈಎಸ್ಪಿ ಮಹಾದೇವ್ ಮತ್ತು ಇನ್ಸ್ಪೆಕ್ಟರ್ ಶೇಖರ್ ರವರ ನೇತೃತ್ವದಲ್ಲಿ ವಿಶೇಷ ತಂಡವೊಂದನ್ನು ರಚನೆ ಮಾಡಿ ಇದೀಗ ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ ಒಟ್ಟಿನಲ್ಲಿ ಕೇವಲ ಹಣದ ಆಸೆಯಿಂದಾಗಿ ಒಂದು ಅಮಾಯಕ ಜೀವವನ್ನು ಪಾಪಿಗಳು ಕೊಲೆ ಮಾಡಿದ್ದಾರೆ.

ವರದಿ-ಕಾರ್ತಿಕ್ ಎಕ್ಸ್ ಪ್ರೆಸ್ ಟಿವಿ ಆನೇಕಲ್

Please follow and like us:

Related posts

Leave a Comment