ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಡಾ. ಚಂದ್ರಶೇಖರ್ ನಿವಾಸದ ಮೇಲೆ ಕಳ್ಳತನಕ್ಕೆ ಯತ್ನ…!

ಕೋಲಾರ : ನಗರದ ಹೊರವಲಯದ ಆರ್ ವಿ ಶಾಲೆಯ ಸಮೀಪದ ಚೇತನ್ ಕ್ಲಿನಿಕ್ ನ ವೈದ್ಯ ಹಾಗೂ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಡಾ. ಚಂದ್ರಶೇಖರ್ ಅವರ ನಿವಾಸದ ಮೇಲೆ ಕಳ್ಳತನಕ್ಕೆ ಯತ್ನಿಸಿ ವಿಫಲಗೊಂಡಿರುವ ಹಿನ್ನೆಲೆಯಲ್ಲಿ ಪರಾರಿಯಾಗಿರುವ ಘಟನೆ ನಡೆದಿದೆ. ಇಲ್ಲಿನ ವೈದ್ಯರ ಮನೆಯ ಹಿಂಬದಿಯ ಬಾಗಿಲನ್ನು ಕಲ್ಲಿನಿಂದ ಹೊಡೆದು ಒಳ ನುಗ್ಗುವ ಪ್ರಯತ್ನ ವಿಫಲಗೊಂಡಿರುವ ಹಿನ್ನೆಲೆಯಲ್ಲಿ ಕುಟುಂಬದ ಸದಸ್ಯರು ಮನೆಯಿಂದ ಹೊರ ಬರುತ್ತಿದಂತೆ ಕಳ್ಳರು ಬಂದ ದಾರಿಗೆ ಸುಂಕವಿಲ್ಲದಂತೆ ಪರಾರಿಯಾಗಿದ್ದಾರೆ. ಪೊಲೀಸ್ ಇಲಾಖೆಯಿಂದ ಸೂಕ್ತ ರಕ್ಷಣೆಗೆ ಮನವಿ ಮಾಡಿದ್ದು ಪದೇ ಪದೇ ಕಳ್ಳರು ನಿವಾಸದ ಮೇಲೆ ಕಳ್ಳತನದ ಯತ್ನ ಮಾಡುತ್ತಿರುವ ಬಗ್ಗೆ ಪೊಲೀಸ್ ಇಲಾಖೆಗೆ ಮನವಿ ಸಲ್ಲಿಸಿದ್ದು ಯಾವುದೇ ಪ್ರಯೋಜನ ಆಗಿಲ್ಲ, ಜೊತೆಗೆ ಇಂತಹ ಘಟನೆಗಳು ಮರುಕಳಿಸದಂತೆ ಗಸ್ತು ಪೊಲೀಸ್ ವ್ಯವಸ್ಥೆಯಾಗಬೇಕು ಎಂದು ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಡಾ. ಚಂದ್ರಶೇಖರ್ ಒತ್ತಾಯಿಸಿದರು.

ವರದಿ-ಬೆಟ್ಟಪ್ಪ ಎಕ್ಸ್ ಪ್ರೆಸ್ ಟಿವಿ ಕೋಲಾರ..

Please follow and like us:

Related posts

Leave a Comment