9 ಕೆ.ಜಿ ಗಾಂಜಾ ವಶಪಡಿಸಿಕೊಂಡ ಹಟ್ಟಿ ಚಿನ್ನದ ಗಣಿ ಪೋಲಿಸರು..!

ಲಿಂಗಸೂಗೂರು: ರಾಯಾಚೂರು ಜಿಲ್ಲೆಯ ಲಿಂಗಸೂಗೂರು ತಾಲ್ಲೂಕಿನ ಗುಜಲರ್ ದೊಡ್ಡಿಯ ಜಮೀನಿನಲ್ಲಿ ಆಕ್ರಮವಾಗಿ ಬೆಳೆದಿದ್ದಂತಹ ಗಾಂಜಾ ಸೊಪ್ಪನ್ನು ಪೋಲಿಸರು ವಶಪಡಿಸಿಕೊಂಡಿದ್ದಾರೆ.ಪರಸಪ್ಪ ತಂ/ಅಮರಣ್ಣ, ಅಮರೇಶ್ ತಂ/ಭೀಮಣ್ಣ ನವರ ಜಮೀನಿನಲ್ಲಿ ಗಾಂಜಾ ಬೆಳೆದಿರುವುದರ ಬಗ್ಗೆ ಖಚಿತ ಮಾಹಿತಿ ಆಧಾರದ ಮೇಲೆ ಲಿಂಗಸೂಗೂರು ಸಿಪಿಐ, ಹಟ್ಟಿಯ ಪಿಎಸ್ಐ, ಡಿವೈಎಸ್ಪಿ,ನೇತೃತ್ವದಲ್ಲಿ ದಾಳಿ ನಡೆಸಿ ಸ್ಥಳಕ್ಕೆ ಭೇಟಿ ನೀಡಿ ಪರೀಶಿಲಿಸಿದಾಗ ತೊಗರಿ ಬೆಳೆಯ ಮಧ್ಯದಲ್ಲಿ ಗಾಂಜಾ ಗಿಡಗಳು ಬೆಳೆದಿರುವುದು ಕಂಡುಬಂದಿದೆ. ಇನ್ನೂ 16 ಸಾವಿರ ಬೆಲೆ ಬಾಳುವ 9 ಕೆ.ಜಿ.ಗಾಂಜಾವನ್ನು ಪೋಲಿಸರು ವಶಕ್ಕೆ ಪಡೆದು ಅರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಲಾಗಿದ್ದು, ಹಟ್ಟಿ ಚಿನ್ನದ ಗಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.

ವರದಿ-ವೀರೇಶ್ ಅರಮನಿ ಎಕ್ಸ್ ಪ್ರೆಸ್ ಟಿವಿ ಲಿಂಗಸೂಗೂರು

Please follow and like us:

Related posts

Leave a Comment