ರಸ್ತಾಪುರ ಭೀಮಕವಿ ಸಮಾಧಿ ಸ್ಥಳಕ್ಕೆ – ಮುಕ್ಕಣ್ಣ ಕರಿಗಾರ ಭೇಟಿ…!

ಶಹಾಪುರ : ಜಗತ್ತಿಗೆ ಬೆರಗುಗೊಳಿಸುವ ಕನ್ನಡ ಸಾಹಿತ್ಯದ ವಿವಿಧ ಪ್ರಕಾರಗಳಾದ ಕಥೆ, ಕಾವ್ಯ,ನಾಟಕ,ಕಾದಂಬರಿ ಜೀವನದ ಬದಲಾವಣೆ ತರುವಲ್ಲಿ ಅಪಾರ ಕೊಡುಗೆ ನೀಡಿವೆ. ಅದರಲ್ಲೂ ರಸ್ತಾಪುರ ಭೀಮಕವಿಯ ಸಾಹಿತ್ಯ ಎಲ್ಲರನ್ನು ನಿಬ್ಬೆರಗೊಳಿಸುವಂತೆ ಮಾಡಿದೆ ಎಂದು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿಗಳಾದ ಮುಕ್ಕಣ್ಣ ಕರಿಗಾರ ಹೇಳಿದರು. ತಾಲ್ಲೂಕಿನ ರಸ್ತಾಪುರ ಭೀಮಕವಿಯ ಸಮಾಧಿಯ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದರು. ಮಹಾನ್ ಮೇಧಾವಿ ಸುರಪುರ ರಾಜರ ಮನೆತನದಲ್ಲಿ ಸಂಸ್ಥಾನದ ಕವಿಯಾಗಿದ್ದರು ಎಂದು ಉಲ್ಲೇಖವಿರುವುದು ತುಂಬಾ ಸಂತೋಷದ ವಿಷಯ ರಸ್ತಾಪುರ ಭೀಮಕವಿಯ ಸಮಾಧಿ ಸ್ಥಳವನ್ನು ಪರಿಶೀಲಿಸಿ ಕಳವಳ ವ್ಯಕ್ತಪಡಿಸಿದರು. ಜನಪ್ರತಿನಿಧಿಗಳು ಹಾಗೂ ಸಾಹಿತ್ಯಾಸಕ್ತರು,ಗ್ರಾಮದ ಯುವಕರು ಸೇರಿಕೊಂಡು ಇಂತಹ ಮಹಾನ್ ಪುರುಷರ ಸಮಾಧಿಯ ಸ್ಥಳವನ್ನು ಜೀರ್ಣೋದ್ಧಾರಗೊಳಿಸಿ ಪ್ರೇಕ್ಷಣೀಯ ಸ್ಥಳವನ್ನಾಗಿ ವಲ್ಲಿ ಶ್ರಮವಹಿಸಬೇಕಾಗಿದೆ ಎಂದು ನುಡಿದರು.ರಸ್ತಾಪುರ ಭೀಮಕವಿಯು ಹಲವಾರು ನಾಟಕಗಳು, ಕಾವ್ಯಗಳು,ಪುರಾಣಗಳ ಗ್ರಂಥಗಳು ರಚಿಸಿ ಅಲ್ಲದೇ ಹಾಲುಮತ ಸಂಸ್ಕೃತಿಯನ್ನು ಎತ್ತಿ ಹಿಡಿದಿದ್ದರು.ತೆಲುಗಿನ ಮಹಾಕಾವ್ಯವನ್ನು ಕನ್ನಡ ಭಾಷೆಗೆ ಭಾಷಾಂತರಿಸಿರುವ ಕೀರ್ತಿ ರಸ್ತಾಪುರ ಭೀಮ ಕವಿಗೆ ಸಲ್ಲುತ್ತದೆ ಇಂತಹ ಮಹಾನ್ ಹಿರಿಯ ಸಾಹಿತಿಗಳ ಜೀವನ ಬದುಕು ಮತ್ತು ಬರಹ ಇಂದಿನ ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಿವೆ ಇನ್ನಷ್ಟು ವಿದ್ಯಾರ್ಥಿಗಳಿಗೆ ತಿಳಿಪಡಿಸುವ ಪ್ರಯತ್ನ ಸಂಘ ಸಂಸ್ಥೆಗಳು ಬುದ್ಧಿಜೀವಿಗಳು ಪ್ರಗತಿಪರ ಚಿಂತಕರು ಮಾಡಬೇಕಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧಿಕಾರಿಗಳಾದ ಸಂಗಣ್ಣ ಮಲ್ಲಪ್ಪ ಪರಮಣ್ಣ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ವರದಿ-ಬಸವರಾಜ್ ಸಿನ್ನೂರ ಎಕ್ಸ್ ಪ್ರೆಸ್ ಟಿವಿ ಶಹಾಪುರ

Please follow and like us:

Related posts

Leave a Comment