ನಾನು ಒಬ್ಬನೇ ಅಲ್ಲಾ 28 ಶಾಸಕರು ಕೊಲೊಂಬೋ ಕ್ಯಾಸಿನೋಗೆ ಹೋಗಿದ್ದರು : ಜಮೀರ್ ಅಹ್ಮದ್..!

ಬೆಂಗಳೂರು : ಡ್ರಗ್ಸ್ ದಂಧೆ ಪ್ರಕರಣದಲ್ಲಿ ಶಾಸಕ ಜಮೀರ್ ಅಹ್ಮದ್ ಹೆಸರು ಕೇಳಿಬಂದಿದೆ. ಇದೀಗ ನಾನು ಕೊಲೊಂಬೊಗೆ ಹೋಗಿದ್ದು ನಿಜ, ಅಷ್ಟೇ ಅಲ್ಲದೇ 28 ಶಾಸಕರು ಸಹ ಕೊಲೊಂಬೊ ಕ್ಯಾಸಿನೋಗೆ ಹೋಗಿದ್ದರು ಎಂದು ಸ್ಫೋಟಕ ಮಾಹಿತಿ ನೀಡಿದ್ದಾರೆ. ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದ ಶಾಸಕ ಜಮೀರ್ ಅಹ್ಮದ್, ನಾನು ಕೊಲೊಂಬೊಗೆ ಹೋಗಿದ್ದೆ, ಜೆಡಿಎಸ್ನಲ್ಲಿ ಇದ್ದಾಗ ಕುಮಾರಸ್ವಾಮಿ ಸಹ ಹೋಗಿದ್ದರು. ಅಲ್ಲದೇ ಜೆಡಿಎಸ್ನ 28 ಶಾಸಕರು ಸಹ ಕೊಲೊಂಬೊ ಕ್ಯಾಸಿನೋಗೆ ಹೋಗಿದ್ದರು. ಡ್ರಗ್ಸ್ ದಂಧೆಯಲ್ಲಿ ನನ್ನ ಬಗ್ಗೆ ಸಾಬೀತಾದ್ರೆ ನನ್ನನ್ನ ಹಲ್ಲಿಗೆ ಹಾಕಲಿ ಎಂದು ಹೇಳಿದ್ದಾರೆ. ಇನ್ನು ಕುಮಾರಸ್ವಾಮಿ ವಿಷಯ ಪ್ರಸ್ತಾಪಿಸುತ್ತಿದ್ದಂತೆ ಸರಣಿ ಟ್ವೀಟ್ ಮಾಡುವ ಮುಖಾಂತರ ಜಮೀರ್ ಅಹ್ಮದ್ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಕೊಲೊಂಬೊಗೆ ಹೋಗುವುದಾಗಿ ನಾವು ಬಹಿರಂಗವಾಗಿಯೇ ಹೇಳಿ ಹೋಗಿದ್ದೇವೆ ಎಂದಿದ್ದಾರೆ. ಪಕ್ಷ ಸಂಘಟನೆ ಬಗ್ಗೆ ವಿಸ್ತೃತವಾಗಿ ಚರ್ಚೆ ನಡೆಸಲು ಕೊಲೊಂಬೊಗೆ ಹೊಗುವುದಾಗಿ ಬಹಿರಂಗವಾಗಿಯೇ ಹೇಳಿದ್ದೇವೆ. ಅಲ್ಲದೇ ನಾವು ನಡೆಸಿದ ಶಾಸಕರ ಜೊತೆಗಿನ ಚರ್ಚೆ ದೃಶ್ಯಾವಳಿಗಳಲ್ಲಿ ಬಿಡುಗಡೆ ಮಾಡಿದ್ದೇವೆ. ಇದರಲ್ಲಿ ಯಾವುದೇ ಗುಟ್ಟು ಇರಲಿಲ್ಲ ಎಂದಿದ್ದಾರೆ.

ವರದಿ-ಸುಪ್ರಿಯಾ ಶರ್ಮಾ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Please follow and like us:

Related posts

Leave a Comment