ಮಾಜಿ ಪ್ರಧಾನಿ ದೇವೆಗೌಡರ ಪುತ್ಥಳಿಕೆಗೆ ಬೆಂಕಿಟ್ಟ ಕಿಡಗೇಡಿಗಳು ಪತ್ತೆ..!

ಸಿಂದಗಿ: ಪಟ್ಟಣದ ಸಂಗಮ ಹೋಟೆಲ್ ನಲ್ಲಿ ಕರವೇ ಉತ್ತರ ಕರ್ನಾಟಕ ಅಧ್ಯಕ್ಷ ಸಂತೊಷ ಪಾಟೀಲ(ಡಂಬಳ)ಪತ್ರಿಕಾಗೊಷ್ಠಿ ಕಳೆದ ವರ್ಷ ಸಿಂದಗಿ ತಾಲೂಕಿನ ಗೊಲಗೇರಿ ಗ್ರಾಮದಲ್ಲಿ ಮಾಜಿ ಪ್ರದಾನಿ ಎಚ್ ಡಿ ದೇವೆಗೌಡರ ಮತ್ತು ಸಿಂದಗಿ ಮಾಜಿ ಸಚಿವ ಹಾಲಿ ಜೆಡಿಎಸ್ ಶಾಸಕ ಎಮ್ ಸಿ ಮನಗೂಳಿಯವರ ಕಂಚಿನ ಪುತ್ಥಳಿಗೆ ಬೆಂಕಿ ಹಚ್ಚಿದ ಕಿಡಿಗೆಡಿಗಳನ್ನು ಪತ್ತೆ ಹಚ್ಚಿ ಸರ್ಕಾರಕ್ಕೆ ಪೋಲಿಸ್ ಇಲಾಖೆ ದೋಷಾರೊಪ್ಪ ಪಟ್ಟಿ ಸಲ್ಲಿಸಿದೆ ದುಷ್ಯಕೃತ್ಯ ಎಸೆದ ಕಿಡಗೇಡಿಗಳನ್ನ ಕೂಡಲೇ ರಾಜ್ಯದಿಂದ ಗಡಿಪಾರು ಮಾಡಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದರು. ಒಂದು ವರ್ಷದ ಸತತ ಹೋರಾಟದ ಪ್ರತಿಫಲದಿಂದ ಸಿಂದಗಿ ತಾಲೂಕಿನಲ್ಲಿ ಅಶಾಂತಿಗೆ ಕಾರಣಿಕರ್ತರಾದ ಆರೋಪಿಗಳ ಬಂದನಕ್ಕಾಗಿ ದರಣಿಕುಳಿತ ಸಂದರ್ಭದಲ್ಲಿ ಆಗೀನ ಪೋಲಿಸ್ ವರಿಷ್ಠಾಧಿಕಾರಿ ಪ್ರಕಾಶ್ ನಿಕ್ಕಿಂ ಆಗಮಿಸಿ ದೃಷಕೃತ್ಯ ವೇಸಗಿದ ಕಿಡಿಗೆಡಿಗಳನ್ನ ಆದಷ್ಟು ಬೇಗ ಪತ್ತೆಹಚ್ಚಿ ಜಿಲ್ಲೆಯಿಂದ ಗಡಿಪಾರು ಮಾಡುವುದಾಗೆ ಹೇಳಿಕೆ ನೀಡಿದ್ದರು. ಆದರೆ ಇಂದು ಕೃತ್ಯವೇಸಗಿದ ಕಿಡಗೇಡಿಗಳು ಜಾಮಿನಿನ ಮೇಲೆ ಹೊರಬಂದು ರಾಜಾರೋಷವಾಗಿ ಹೊರಗಡೆ ತಿರಗಾಡುತ್ತಿದ್ದಾರೆ ಅದಕ್ಕೆ ಅವರ ಮೇಲೆ ಸೂಕ್ತ ಕ್ರಮ ಜರುಗಿಸಿ ರಾಜ್ಯದಿಂದ ಗಡಿಪಾರು ಮಾಡಬೇಕೆಂದು ಪೋಲಿಸ್ ಇಲಾಖೆಗೆ ಮನವಿ ಮಾಡಿದರು. ಅಂದು ಕ್ಷೇತ್ರದ ಇಬ್ಬರು ಮಾಜಿ ಶಾಸಕರಾದ ಶರಣ್ಣಪ್ಪ ಸುಣಗಾರ, ರಮೇಶ್ ಭೂಸನೂರ ಬೆಂಬಲಿಸಿದ ಪರಿಣಾಮ ನಮ್ಮ ಹೊರಾಟಕ್ಕೆಜಯ ಸಿಕ್ಕಿದಂತಾಗಿದೆ ಹಾಗೂ ಹೋರಾಟಕ್ಕೆ ಬೆಂಬಲಿಸಿದ ಎಲ್ಲಾ ಸಂಘಟನೆಗಳು ಮತ್ತು ರಾಜಕೀಯ ಪಕ್ಷಗಳಿಗೆ ಧನ್ಯವಾದ ತಿಳಿಸಿದರು. ಇನ್ನು ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ಬಿ, ಆರ್ ಯಂಟಮಾನ ಬಿಜೆಪಿ ಮುಖಂಡರಾದ ಸಿದ್ದು ಬುಳ್ಳಾ, ರವಿ ನಾಯ್ಕೋಡಿ, ಗೌಡಣ ಆಲಮೇಲ, ಶ್ರೀಕಾಂತ ಬಿಜಾಪುರ ಇತರರು ಭಾಗವಹಿಸಿದ್ದರು..

ವರದಿ: ಅಂಬರೀಶ್ ಎಸ್. ಎಸ್ ಎಕ್ಸ್ ಪ್ರೆಸ್ ಟಿವಿ ಸಿಂಧಗಿ

Please follow and like us:

Related posts

Leave a Comment