ಸಾಲಾಭಾದೆ ತಾಳಲಾರದೇ ರೈತ ಆತ್ಮಹತ್ಯೆ..!

ಸಿಂದಗಿ: ಸಾಲಭಾದೆ ತಾಳಲಾರದೆ ರೈತ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಗಣಿಹಾರ ಗ್ರಾಮದಲ್ಲಿ ನಡೆದಿದೆ. ಸಿದ್ದಲಿಂಗಪ್ಪ ರೋಡಗಿ ಎಂಬಾ ರೈತ ಸಿಂಡಿಕೇಟ್ ಬ್ಯಾಂಕ್ ನಲ್ಲಿ 60 ಸಾವಿರ ಸೇರಿದಂತೆ ಸುಮಾರು 3 ಲಕ್ಷ ಸಾಲ ಕೈ ಸಾಲ ಮಾಡಿದ್ದು, ರೈತ ಕೊರೊನಾದಿಂದ ಹಾಗೂ ಸರಿಯಾದ ಮಳೆ-ಬೆಳೆ ಇಲ್ಲದೆ ಬೆಳೆದಿದ್ದ ಬೆಳೆ ನಾಶದಿಂದ ಮನನೊಂದು ತನ್ನ ಜಮೀನಲ್ಲಿಯೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಇನ್ನೂ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಸಿಂಧಗಿ ಪೋಲಿಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವರದಿ- ಅಂಬರೀಶ್ ಎಸ್. ಎಸ್ ಎಕ್ಸ್ ಪ್ರೆಸ್ ಟಿವಿ ಸಿಂಧಗಿ

Please follow and like us:

Related posts

Leave a Comment