ಶಸ್ತ್ರ ಚಿಕಿತ್ಸೆಗೆ ಧನ ಸಹಾಯ- ಸಿ.ಬಿ.ಶಶಿಧರ್…!

ತಿಪಟೂರು : ತಾಲ್ಲೂಕಿನ ನೊಣವಿನಕೆರೆ ಹೋಬಳಿ, ಮತಿಘಟ್ಟ ಗ್ರಾಮದಲ್ಲಿ ಟೈಲರ್ ವೃತ್ತಿಯನ್ನು ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ವ್ಯಕ್ತಿ ಕಳೆದ 4 ವರ್ಷದಿಂದ ಕೈಕಾಲು ಸ್ವಾಧಿನ ಕಳೆದುಕೊಂಡಿದ್ದ ವ್ಯಕ್ತಿಯ ಶಸ್ತ್ರ ಚಿಕಿತ್ಸೆಗೆ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ತಿಪಟೂರು ತಾಲ್ಲೂಕು ಕಾಂಗ್ರೆಸ್ ಮುಖಂಡರಾದ ಸಿ.ಬಿ.ಶಶಿಧರ್ ಧನಸಹಾಯಮಾಡಿದ್ದಾರೆ.ತಿಪಟೂರು ತಾಲ್ಲೂಕು ನೊಣವಿನಕೆರೆ ಹೋಬಳಿ ಹುಣಸೇಘಟ್ಟ ಗ್ರಾಮ ಪಂಚಾಯತಿಯ ಮತ್ತಿಘಟ್ಟ ಗ್ರಾಮದ ಅಂಗನವಾಡಿ ಶಿಕ್ಷಕಿ ಚಂದ್ರಮ್ಮಇವರ ಪತಿ ರಾಜಶೇಖರ್ ಟೈಲರ್ ವೃತ್ತಿ ನಿರ್ವಹಿಸುತ್ತಿದ್ದರು. ಕಳೆದ ನಾಲ್ಕು ವರ್ಷದಿಂದ ನರದ ಸಮಸ್ಯೆಯಿಂದ ಕೈ-ಕಾಲುಗಳು ಸ್ವಾಧೀನ ಕಳೆದು ಕೊಂಡಿದ್ದು ವಿಶ್ರಾಂತ ಸ್ಧಿತಿಯಲ್ಲಿದ್ದು ನಗರದ ಮುದ್ರಾ ಆಸ್ಪತ್ರೆಯಲ್ಲಿ ತುರ್ತಾಗಿ ಶಸ್ತçಚಿಕಿತ್ಸೆ ನಡೆಸಲು ಹಣದ ಅವಶ್ಯಕತೆ ತೀರಾ ಇದೆ ಎಂದು ತಿಳಿದು ಶಸ್ತ್ರ ಚಿಕಿತ್ಸೆಗೆ ಹಣದ ಕೊರತೆಯಿದ್ದ ಕಾರಣ ತಿಪಟೂರು ಸಿ.ಬಿ.ಶಶಿಧರ್ ಸಂಪರ್ಕಿಸಿದರು. ಶಶಿಧರ್ ರವರು ಕೂಡಲೇ ಆಸ್ಪತ್ರೆಗೆ ಭೇಟಿ ಕೊಟ್ಟು ರೋಗಿಯ ಆರೋಗ್ಯವನ್ನು ವಿಚಾರಿಸಿ, ಧೈರ್ಯತುಂಬಿ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿ, ಮೊದಲಿನಂತಾಗಲಿ ಎಂದು ಹಾರೈಸಿದರು.

ವರದಿ- ಸಿದ್ದೇಶ್ವರ ಸಿಎನ್ ಎಕ್ಸ್ ಪ್ರೆಸ್ ಟಿವಿ ತಿಪಟೂರು

Please follow and like us:

Related posts

Leave a Comment