ಕೇಂದ್ರ ಸರ್ಕಾರದ ಸರ್ವಾಧಿಕಾರಿ ವಿರೋಧಿಸಿ ಪ್ರತಿಭಟನೆ..!

ಸಿಂಧನೂರು: ಕೇಂದ್ರ ಸರ್ಕಾರದ ಸರ್ವಾಧಿಕಾರಿ ವಿರೋಧಿಸಿ ಹಾಗೂ ಸಿ.ಪಿ.ಐ(ಎಮ್) ಪಕ್ಷದ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೊಚುರಿ ಸೇರಿದಂತೆ ದೇಶದ ಗಣ್ಯರ ಮೇಲೆ ಹಾಕಿರುವ ಕೇಸ್ ಗಳನ್ನು ವಾಪಸ್ ಪಡೆಯಲು ಒತ್ತಾಯಿಸಿ ಮೋದಿ ಹಾಗೂ ಅಮೀತ್ ಷಾ ಪ್ರತಿಕೃತಿ ದಹನ ಮಾಡುವ ಮೂಲಕ ಪ್ರತಿಭಟನೆಯನ್ನು ನಗರದ ಗಾಂಧಿ ವೃತ್ತದಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷ ( ಮಾರ್ಕ್ಸ್‌ವಾದಿ) ತಾಲೂಕು ಸಮಿತಿಯಿಂದ ನಡೆಸಲಾಯಿತು. ದೆಹಲಿಯಲ್ಲಿ ನಡೆದ ಗಲಭೆ ಪ್ರಚೋದನೆ ನೀಡಿದ್ದಾರೆ ಎಂದು ಕೆಂದ್ರ ಸರಕಾರದ ಗೃಹ ಮಂತ್ರಾಲಯ ದಡಿಯಲ್ಲಿ ಕಾರ್ಯನಿರ್ವಹಿಸುವ ದೆಹಲಿ ಪೋಲಿಸರು ದೇಶದ ಅಗ್ರಗಣ್ಯ ನಾಯಕರ ಮೇಲೆ ಹುಸಿ ಆರೋಪವನ್ನು ಹೊರಿಸುವ ಮೂಲಕ ಪ್ರಜಾಪ್ರಭುತ್ವ ಚಳುವಳಿಯನ್ನು ಹಣಿಯುವ ಉದ್ದೇಶದಿಂದ ಕೇಂದ್ರ ಸರ್ಕಾರ ದುಷ್ಜೃತ್ಯವನಯ ಮುಂದುವರೇಸಿದೆ. ಇದನ್ನು ಭಾರತ ಕಮ್ಯುನಿಸ್ಟ್ ಪಕ್ಷ ಬಲವಾಗಿ ಖಂಡಿಸುತ್ತದೆ.ಸಿಪಿಐಎಂ ಪಕ್ಷದ ಅಖಿಲ ಭಾರತ ಪ್ರಧಾನ ಕಾರ್ಯದರ್ಶಿಗಳಾದ ಕಾಮ್ರೇಡ್ ಸೀತಾರಾಂ ಯೆಚೂರಿ.ಆರ್ಥಿಕ ತಜ್ಞರಾದ ಡಾಕ್ಟರ್ ಜಯತಿ ಸೇರಿದಂತೆ ಹಲವು ಗಣ್ಯರ ಮೇಲೆ ಹಾಕಿರುವ ಕೇಸುಗಳನ್ನು ವಾಪಸ್ಸು ಪಡೆಯಲು ಆಗ್ರಹಿಸಿ ಮೋದಿ ಹಾಗೂ ಅಮಿತ್ ಶಾ ಅವರ ಪ್ರತಿಕೃತಿಯನ್ನು ದಹಿಸಲಾಯಿತು.ನಂತರ ಮನೆ ಪತ್ರವನ್ನು ತಹಸೀಲ್ದಾರ್ ಮೂಲಕ ರಾಷ್ಟ್ರಪತಿಗಳಿಗೆ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ :ನರಸಿಂಹಪ್ಪ ದೇವೇಂದ್ರಗೌಡ ಯಂಕಪ್ಪ ಕೆಂಗಲ್ ಅಪ್ಪಣ್ಣ ಕಾಂಬಳೆ ಸೇರಿದಂತೆ ಇತರೆ ಮುಖಂಡರು ಭಾಗವಹಿಸಿದ್ದರು.

ವರದಿ-ಸೈಯದ್ ಬಂಧೇನವಾಜ್ ಎಕ್ಸ್ ಪ್ರೆಸ್ ಟಿವಿ ಸಿಂಧನೂರು

Please follow and like us:

Related posts

Leave a Comment