ಅಂಬೇಡ್ಕರರ ಜೀವನ ಚರಿತ್ರೆ ಎಲ್ಲರೂ ಅರಿತುಕೊಳ್ಳಬೇಕು- ಕಾಂಗ್ರೆಸ್ ಮುಖಂಡ ಶರಣಪ್ಪ ಟಣಕೆದಾರ..!

ಶಹಾಪುರ : ಭಾರತ ದೇಶದ ಪ್ರತಿಯೊಬ್ಬ ಪ್ರಜೆಯೂ ಅಂಬೇಡ್ಕರರ ಬಾಲ್ಯ ಜೀವನ ಹಾಗೂ ಅವರ ಚರಿತ್ರೆ ಮತ್ತು ತತ್ವಾದರ್ಶಗಳು ಎಲ್ಲರೂ ಅರಿತುಕೊಳ್ಳಬೇಕಾಗಿದೆ ಎಂದು ಕಾಂಗ್ರೆಸ್ ಮುಖಂಡರಾದ ಶರಣಪ್ಪ ಟಣಕೆದಾರ ಹೇಳಿದರು. ತಾಲ್ಲೂಕಿನ ಹತ್ತಿಗೂಡೂರ ಗ್ರಾಮದಲ್ಲಿ ಜೀ ಕನ್ನಡ ಧಾರಾವಾಹಿಯಲ್ಲಿ ಪ್ರಸಾರ ಆಗುತ್ತಿರುವ ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮಹಾನಾಯಕ ಧಾರಾವಾಹಿಯನ್ನು ಡಾ ಬಿಆರ್ ಅಂಬೇಡ್ಕರ್ ಅಭಿಮಾನಿ ಬಳಗದಿಂದ ಬೃಹತ್ ಆಕಾರದ ಬ್ಯಾನರ್ ಲೋಕಾರ್ಪಣೆ ಮಾಡಲಾಯಿತು ಈ ಸಂದರ್ಭದಲ್ಲಿ ಜೀ ಕನ್ನಡದ ಮುಖ್ಯಸ್ಥರಾದ ರಾಘವೇಂದ್ರ ಹುಣಸೂರ ಅವರಿಗೆ ಅಭಿನಂದನೆ ಸಲ್ಲಿಸಲಾಯಿತು.ಯುವ ಮುಖಂಡ ಶರಣರೆಡ್ಡಿ ಹತ್ತಿಗೂಡುರು ಮಾತನಾಡಿ ಕೆಲವು ಕಿಡಿಗೇಡಿಗಳು ರಾಘವೇಂದ್ರ ಹುಣಸೂರು ಅವರಿಗೆ ಜೀವ ಬೆದರಿಕೆ ಹಾಕುತ್ತಿದ್ದಾರೆ.ಸತ್ಯವನ್ನು ಅರಗಿಸಿಕೊಳ್ಳದ ಅವಿವೇಕಿಗಳು ಇಂಥ ಕೃತ್ಯಗಳು ಮಾಡುತ್ತಿರುತ್ತಾರೆ ಯಾವುದಕ್ಕೂ ಕಿವಿಗೊಡಬೇಡಿ ಎಂದು ಅವರಿಗೆ ಬೆಂಬಲ ಸೂಚಿಸಿದರು.ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರಾದ ಬಸವಂತರೆಡ್ಡಿ ಸಾಹು ಹತ್ತಿಗೂಡೂರ,ದಲಿತ ಮುಖಂಡರಾದ ತಿಪ್ಪಣ್ಣ ಘ೦ಟಿ,ಗುರಪ್ಪ ಸುರಪುರ,ಅಯ್ಯಣ್ಣ ಮಹಾಮನಿ,ಶೇಖರ್ ನಾಟೇಕರ್,ವೀರಣ್ಣ ಅಂಗಡಿ, ಭೀಮರಾಯ ಹೊಸಮನಿ, ಮಲ್ಲಣ್ಣ ಬೀರನೂರ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ವರದಿ- ಬಸವರಾಜ ಸಿನ್ನೂರ ಎಕ್ಸ್ ಪ್ರೆಸ್ ಟಿವಿ ಶಹಾಪುರ

Please follow and like us:

Related posts

Leave a Comment