ಮಂಡ್ಯ ಜಿಲ್ಲೆಗೆ ಮಾದರಿಯಾದ ನಾಗಮಂಗಲ ತಾಲೂಕಿನ ಹರದನಹಳ್ಳಿ ಪದವಿಪೂರ್ವ ಕಾಲೇಜು..!

ನಾಗಮಂಗಲ: ಸಕ್ಕರೆಯ ನಾಡು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ದೇವಲಾಪುರ ಹೋಬಳಿಯ ಹರದನಹಳ್ಳಿ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜು ರಾಜ್ಯದ ಉತ್ತಮ 15 ಕಾಲೇಜುಗಳ ಪಟ್ಟಿಯಲ್ಲಿ ಜಿಲ್ಲೆಯ ಏಕೈಕ ಕಾಲೇಜಾಗಿ ಹೊರಹೊಮ್ಮುವ ಮೂಲಕ ಜಿಲ್ಲೆಗೆ ಮಾದರಿಯಾಗಿದೆ. ಜಿಲ್ಲಾಧ್ಯಂತ ಸರ್ಕಾರಿ 71 ಹಾಗೂ ಖಾಸಗಿ 88 ಸೇರಿ ಒಟ್ಟು 159ರಲ್ಲಿ ತಾಲೂಕಿನ 17 ಪ.ಪೂ.ಕಾಲೇಜುಗಳಲ್ಲೊಂದಾದ ತಾಲೂಕಿನ ಗ್ರಾಮೀಣ ಪ್ರದೇಶದ ಹರದನಹಳ್ಳಿಯ ಹೊರವಲಯದಲ್ಲಿರುವ ಸರ್ಕಾರಿ ಕಾಲೇಜಿನ ಈ ಸಾಧನೆ ತಾಲೂಕಿನ ಶೈಕ್ಷಣಿಕ ಹಿರಿಮೆಯನ್ನು ಹೆಚ್ಚಿಸಿದೆ. ರಾಜ್ಯ ಸರ್ಕಾರದ ವತಿಯಿಂದ ಸತತ ಮೂರು ವರ್ಷಗಳ ಫಲಿತಾಂಶವನ್ನು ಪರಿಗಣಿಸಿ ಪ್ರಕಟಿಸಲಾಗುವ ಅತ್ಯುತ್ತಮ ಕಾಲೇಜುಗಳ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿರುವ ಕಾಲೇಜಿಗೆ ಜಿಲ್ಲಾಧ್ಯಂತ ಪ್ರಶಂಸೆ ವ್ಯಕ್ತವಾಗುತ್ತಿದೆ. ಸತತ ಮೂರು ವರ್ಷಗಳಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಹೆಚ್ಚು ವಿದ್ಯಾರ್ಥಿಗಳು ತೇರ್ಗಡೆ ಹೊಂದಿರುವುದು ಕಾಲೇಜಿನ ಸಾಧನೆಯ ಗರಿಗೆ ಮತ್ತೊಂದು ಮಕುಟವಾಗಿದೆ. ರಾಜ್ಯ ಮಟ್ಟದ ಇಂತಹ ಪ್ರಶಸ್ತಿಗೆ ಇಡೀ ಜಿಲ್ಲೆಗೆ ಈ ಕಾಲೇಜು ಪ್ರಥಮ ಬಾರಿಗೆ ಭಾಜನವಾಗಿರುವ ಹೆಗ್ಗಳಿಕೆಯ ಐತಿಹಾಸಿಕ ಸಾಲಿಗೆ ಸೇರ್ಪಡೆಯಾಗಿದೆ. ಇಂತಹ ಕಾಲೇಜಿನ ಈ ಸಾಧನೆಯನ್ನು ಪರಿಗಣಿಸಿ ಸರ್ಕಾರದ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಪಾರಿತೋಷಕ ಹಾಗೂ ರೂ.25 ಸಾವಿರ ಪ್ರೋತ್ಸಹ ಧನದ ಡಿಡಿ ಮೂಲಕ ಅಭಿನಂದಿಸಲಾಗಿದ್ದು, ಶಾಸಕ ಸುರೇಶ್ಗೌಿಡ ಸರ್ಕಾರದ ಪರವಾಗಿ ಕಾಲೇಜಿನ ಪ್ರಾಂಶುಪಾಲರಿಗೆ ನೀಡುವ ಮೂಲಕ ಅಭಿನಂದಿಸಿದರು.ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದ ಶಾಸಕ ಸುರೇಶ್ಗೌ ಡ, ಪ್ರೌಢ ಮಟ್ಟದ ಶಿಕ್ಷಣದ ನಂತರದ ಪದವಿ ಪೂರ್ವ ಕಾಲೇಜಿಗೆ ಇರಬೇಕಾದ ಕನಿಷ್ಠ ಮೂಲಭೂತ ಸೌಕರ್ಯಗಳಿಲ್ಲದಿದ್ದರೂ, ರಾಜ್ಯಮಟ್ಟದ ಸಾಧನೆ ನಿಜಕ್ಕೂ ಅಭಿನಂದನಾರ್ಹ. ಭೋದಕ ವರ್ಗದ ಇಚ್ಚಾ ಮತ್ತು ಕ್ರಿಯಾಸಕ್ತಿಗೆ ಪೂರಕವಾದ ವಾತವರಣ ವಿದ್ಯಾರ್ಥಿಗಳಲ್ಲಿನ ಸಹಕಾರಸಕ್ತಿ ಇಂತಹ ಸಾಧನೆಗೆ ಸಹಕಾರಿ. ಪದವಿ ಪೂರ್ವ ಶಿಕ್ಷಣ ಶೈಕ್ಷಣಿಕ ಕ್ಷೇತ್ರದಲ್ಲಿ ಪ್ರತಿ ವಿದ್ಯಾರ್ಥಿಯ ತಿರುವಿನ ಮಹತ್ತರ ಹಂತ. ಈ ನಿಟ್ಟಿನಲ್ಲಿ ಭವಿಷ್ಯದ ಬಗ್ಗೆ ಆಲೋಚನೆಯ ಜತೆಗೆ ಮೌಲ್ಯಾಧಾರಿತ ಚಿಂತನೆ ತಮ್ಮಲ್ಲಿ ಅನಾವರಣವಾಗಬೇಕು. ವೈಯಕ್ತಿಕ ಮತ್ತು ಸಮುದಾಯದ ಯಾವುದೇ ಸಮಸ್ಯೆಗಳನ್ನು ಪರಿಹರಿಸುವ ಶಕ್ತಿ ಶಿಕ್ಷಣಕ್ಕಿದೆ. ಅಂತಹ ಅತ್ಯುನ್ನತ ಮಟ್ಟದ ಶಕ್ತಿಗಳಾಗಿ ಹೊರಹೊಮ್ಮವ ಸಾಧನಾ ವ್ಯಕ್ತಿಗಳಾಗಿ ಈ ಕಾಲೇಜಿನ ಮತ್ತು ಪೋಷಕರ ಹೆಸರನ್ನು ರಾಷ್ಟ್ರ ಮತ್ತು ವಿಶ್ವಮಟ್ಟದಲ್ಲಿ ಬೆಳಗಿಸುವ ಅನನ್ಯ ಶಕ್ತಿಗಳಾಗಿ ಎಂದು ಆಶೀಸಿದರು.ಈ ಸಂದರ್ಭ ಎಪಿಎಂಸಿ ಅಧ್ಯಕ್ಷ ರಮೇಶ್, ಮನ್ಮುಲ್ ನಿರ್ದೇಶಕರಾದ ನೆಲ್ಲಿಗೆರೆ ಬಾಲು ಮತ್ತು ಕೋಟಿರವಿ, ರಾಮಾಂಜನೇಯ ಸಂಘದ ಕಾರ್ಯದರ್ಶಿ ಗೋವಿಂದೇಗೌಡ ಸೇರಿದಂತೆ ಮತ್ತಿತರು ಉಪಸ್ಥೀತರಿದ್ದರು.

ವರದಿ- ಎಸ್.ವೆಂಕಟೇಶ್.ಎಕ್ಸ್ ಪ್ರೆಸ್ ಟಿವಿ ನಾಗಮಂಗಲ.

Please follow and like us:

Related posts

Leave a Comment