ಸ್ವಾತಂತ್ರ್ಯ ಹೋರಾಟಗಾರ ಸಗರ ಅಚ್ಚಪ್ಪಗೌಡ ಸುಬೇದಾರ..!

ಶಹಾಪುರ : 1947ರ ಸಮಯದಲ್ಲಿ ಒಂದೆಡೆ ದೇಶ ಪರಕೀಯರ ಅಧೀನದಿಂದ ಮುಕ್ತಿ ಪಡೆದು ಸ್ವಾತಂತ್ರ್ಯದ ವಿಜಯೋತ್ಸವದಲ್ಲಿದರೆ ಇನ್ನೊಂದೆಡೆ ನಿಜಾಮರ ದಾಸ್ಯದಿಂದ ನರಕಯಾತನೆಯ ಅನುಭವಿಸುತ್ತಿತ್ತು.ಈ ಪ್ರದೇಶ ಅಂದರೆ ಹೈದರಾಬಾದ್ ಕರ್ನಾಟಕದ ಕಲಬುರ್ಗಿ ಬೀದರ್ ಬಳ್ಳಾರಿ ರಾಯಚೂರು ಕೊಪ್ಪಳ ವ್ಯಾಪ್ತಿಯಲ್ಲಿ ಬರುವ ಎಲ್ಲ ಪ್ರದೇಶಗಳು ನಿಜಾಮನ ಅಧೀನದಲ್ಲಿದ್ದವು.ಆತನ ಸಾಮ್ರಾಜ್ಯವು ಭಾರತದೊಂದಿಗೆ ವಿಲೀನಗೊಳಿಸಲು ನಿರಾಕರಿಸಿದ್ದಕ್ಕಾಗಿ ಅಂದಿನ ಗೃಹಮಂತ್ರಿ ಸರದಾರ ವಲ್ಲಬಾಯಿ ಪಟೇಲರ ನೇತೃತ್ವದಲ್ಲಿ ಸಾವಿರಾರು ಜನ ನಿಜ ಅವರ ವಿರುದ್ಧ ಹೋರಾಟಕ್ಕೆ ಸಜ್ಜಾದರು.ರಾಜಕಾರರ ಹಾವಳಿಯಿಂದ ಜನತೆ ತತ್ತರಿಸಿ ಹೋಗಿ ಸಾವು ನೋವುಗಳು ಸಾಕಷ್ಟು ಅನುಭವಿಸಿದ್ದರು. ರಜಾಕಾರರ ಹಾವಳಿಯಿಂದ ಜನರನ್ನು ಪಾರು ಮಾಡಲು ಅಚ್ಚಪ್ಪ ಗೌಡರು ನಿಜಾಮರ ವಿರುದ್ಧ ಟೊಂಕ ಕಟ್ಟಿ ನಿಂತು ಯುದ್ಧಭೂಮಿಯಲ್ಲಿ ಸೆಣಸಾಡಿ ಹೈದರಾಬಾದ್ ಕರ್ನಾಟಕದ ಗೆಲುವಿನ ಕಹಳೆ ಮೊಳಗಿಸಿದರು .ವೀರ ಕೆಚ್ಚೆದೆಯ ಧೀರ ನಾಯಕ ಅಚ್ಚಪ್ಪಗೌಡ ಸುಬೇದಾರ್ ಈ ಚಳವಳಿಯಲ್ಲಿ ಇವರ ಪಾತ್ರ ಮಹತ್ವದ್ದು. ಅಚ್ಚಪ್ಪ ಗೌಡರು ಮೂಲತಃ ಶಹಾಪುರ ತಾಲ್ಲೂಕಿನ ಸಗರ ಗ್ರಾಮದ ಶರಣಪ್ಪಗೌಡ ಗಂಗಮ್ಮ ಸುಬೇದಾರ್ ಎಂಬ ದಂಪತಿಗಳ ಮಗನಾಗಿ 1925 ಫೆಬ್ರವರಿ18 ರಂದು ಜನಿಸಿದರು ಕಲಬುರ್ಗಿ ಮತ್ತು ಹೈದರಾಬಾದಿನಲ್ಲಿ ವಿದ್ಯಾಭ್ಯಾಸ ಮುಗಿಸಿ ಮುಂದೆ ಬಂಟನೂರು ಗ್ರಾಮದಲ್ಲಿ ಶಿಕ್ಷಕ ವೃತ್ತಿಯನ್ನು ಆರಂಭಿಸಿದರು ಆ ದಿನಗಳಲ್ಲಿ ಆಂಗ್ಲರ ದಬ್ಬಾಳಿಕೆ ಮತ್ತು ರಜಾಕಾರರ ವಿರುದ್ಧ ಸಿಡಿದೆದ್ದರು. ಯಾವ ಪ್ರದೇಶಗಳ ಮೇಲೆ ನಿಜಾಮರ ದಬ್ಬಾಳಿಕೆ ಕೊಲೆ ಸುಲಿಗೆ ಮಾಡಿದ್ದರು ಅಂತ ಗ್ರಾಮಗಳಿಗೆ ತಿರುಗಾಡಿ ಸಮೀಕ್ಷೆ ಮಾಡಿ ಅಲ್ಲಿಯ ನೊಂದ ಜನತೆಗೆ ಸಾಂತ್ವನ ಹೇಳಿ ಅವರಲ್ಲಿ ಆತ್ಮಸ್ಥೈರ್ಯ ತುಂಬಿ ಅವರ ವಿರುದ್ಧ ಹೋರಾಟಕ್ಕೆ ಬೆಂಬಲವಾಗಿ ನಿಂತು ಹುರಿದುಂಬಿಸಿದರು.ಗೌಡರ ಬಾಲ್ಯದಿಂದಲೂ ಅವರ ಆಪ್ತರಾಗಿ ಬಲಗೈ ಬಂಟರಾಗಿದ್ದ ಕ್ರಿಯಾಶೀಲರಾಗಿದ್ದ ರಾಯಪ್ಪ ಮತ್ತು ಹಣಮಂತ ಅಚ್ಚಪ್ಪ ಗೌಡರ ಆಪ್ತರಾಗಿದ್ದರು ಅವರೊಂದಿಗೆ ಕುದುರೆ ಸವಾರಿ ಶಸ್ತ್ರ ತರಬೇತಿಯಲ್ಲಿ ತೊಡಗುತ್ತಿದ್ದರೂ ಕಾಕಿ ಟೋಪಿ ಖಾಕಿ ಉಡುಪು ಕಾಲಲ್ಲಿ ಬಿಟ್ಟು ಕೈಯಲ್ಲಿ ಬಂದೂಕು ನಿತ್ಯವೂ ಪರೇಡ್ ನಡೆಸುತ್ತಿದ್ದರೂ ನೋಡೋದಕ್ಕೆ ನೇತಾಜಿ ರೂಪದಲ್ಲಿ ಕಾಣುತ್ತಿದ್ದರು ಅವರ ಅಮ್ಮ ಮಾತಂತೂ ಮಾಣಿಕ್ಯದಂತೆ ಅವರ ಜೀವನ ಶೈಲಿಯ ಮಾತಿಗೆ ಇಂದಿನ ಜನಪದ ಮಹಿಳೆಯರ ಗ್ರಾಮೀಣ ಭಾಗದಲ್ಲಿ ಬೀಸುವಾಗ ಕುಟ್ಟುವಾಗ ಹಾಡನ್ನು ಜಾನಪದ ಶೈಲಿಯಲ್ಲಿ ಹಾಡಿ ಸಂತೋಷ ಕೊಡುತ್ತಾರೆ ಆ ಹಾಡಿನ ತುಣುಕು ಒಂದು ಹೀಗಿದೆ ಪುಂಡಿಯ ಕಟಿಗ್ಯಾಗ ಕೆಂಡ ಒಗೆದವರ್ಯಾರ ಪುಂಡ ಸಗರದ ಅಚ್ಚಪ್ಪಗೌಡ ಆಡಿದ ಮಾತು ಬಂಡಿಗೆ ಕೀಲ ಜಡಿದಂಗ.ಒಂದು ದಿನ ಬಂಟನೂರು ಕ್ಯಾಂಪಿನಲ್ಲಿ ಬ್ಯಾರಿಸ್ಟರ್ ವೆಂಕಟಪ್ಪ ನಾಯಕ ಮತ್ತು ಅಪ್ಪಾರಾವ್ ವಕೀಲ ಹಾಗೂ ಸುಬೇದಾರರು ರಜಾಕಾರರ ವಿರುದ್ಧ ಹೋರಾಟದ ಯೋಜನೆ ರೂಪಿಸುತ್ತಿದ್ದರು. ವಸ್ತುಗಳನ್ನು ನೊಂದ ಬಡ ಜನರಿಗೆ ಹಂಚುತ್ತಿದ್ದರು ಎಂದು ಇಂದಿಗೂ ಕೆಲವರು ಹೇಳಿಕೊಳ್ಳುತ್ತಿದ್ದಾರೆ. ಅಚ್ಚಪ್ಪ ಗೌಡರ ಮೊದಲಿನಿಂದಲೂ ಬಳ್ಳಾರಿಯ ಉಮರ್ ಕಣ್ಣಿನಲ್ಲಿ ನೆಟ್ಟಿದ್ದರೂ ಗೌಡರನ್ನು ಹತ್ಯೆಗೈಯುವುದಾಗಿ ಬಳ್ಳಾರಿ ಉಮರ್ ಒಳಸಂಚು ಆಗಾಗ ರೂಪಿಸಿ ವಿಫಲನಾಗುತ್ತಿದ್ದ. ಒಂದು ದಿನ ಸಗರ ಚಾವಡಿ ಕಟ್ಟೆಯಲ್ಲಿ ಕುಳಿತಿದ್ದ ಗೌಡರ ಮೇಲೆ ಹಠಾತ್ತನೆ ಉಮರ್ ದಾಳಿ ಮಾಡಿದ ಗೌಡರನ್ನು ತಳವಾರದ ಸಭೆ ಬಡಿಯುವುದಕ್ಕೆ ಪ್ರಯತ್ನಿಸಿದ ಗೌಡರು ತಮ್ಮ ಕೈಯಲ್ಲಿನ ಖಡ್ಗದಿಂದ ತಪ್ಪಿಸಿಕೊಳ್ಳುತ್ತಾ ಉಮರ್ ನ ವಿರುದ್ಧ ಹೋರಾಡಿದರು. ಸ್ವಾತಂತ್ರ್ಯದ ಸಲುವಾಗಿ ಮನೆಯ ಮಾರು ಹೆಂಡತಿ ಮಕ್ಕಳು ಬಿಟ್ಟು ಬಂಟನೂರ ಕ್ಯಾಂಪಿನಲ್ಲಿ ಸೇನೆ ಕಟ್ಟಿಕೊಂಡು ನಿರಂತರವಾಗಿ ಹೈದರಾಬಾದ್ ಕರ್ನಾಟಕದ ವಿಮೋಚನೆಗಾಗಿ ಮತ್ತು ಏಳಿಗೆಗಾಗಿ ಗೌಡರು ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದರು ಗೌಡರು ತಮ್ಮ ಜೀವನ ಗೌಡರ ನಿರಂತರ ಹೋರಾಟ ಜೀವನದ ಆದರ್ಶ ತತ್ವಗಳು ಇಂದಿಗೂ ಬದುಕುಳಿದಿವೆ. ಸಾರ್ಥಕ ಬದುಕಿನಿಂದ ಬಾಳಿದ ಅಚ್ಚಪ್ಪ ಗೌಡರು 1983 ಡಿಸೆಂಬರ್ 3 ರಂದು ವಿಧಿವಶರಾದಾಗ ಸಗರ ನಾಡಿಗೆ ಕತ್ತಲಾವರಿಸಿ ದಂತಾಗಿ ಜನರೆಲ್ಲರೂ ದುಃಖದ ಮಡುವಿನಲ್ಲಿ ಮುಳುಗಿದ್ದರು ಅವರು ಅಗಲಿ 35 ವರ್ಷಗಳ ಕ್ಕೂ ಹೆಚ್ಚು ಕಾಲ ಗತಿಸಿದರೂ ಅವರ ಸಾಹಸ ವೀರಗಾಥೆ ಧೈರ್ಯ ಇಂದಿಗೂ ಜೀವಂತವಾಗಿದೆ.

ವರದಿ-ಬಸವರಾಜ ಸಿನ್ನೂರು ಶಹಾಪುರ.

Please follow and like us:

Related posts

Leave a Comment