ಮಹಾನಾಯಕ ಧಾರಾವಾಹಿಯ ಬ್ಯಾನರ್ ಗೆ ಪುಷ್ಪಾರ್ಚನೆ, SFI ನಗರ ಘಟಕ ಅಧ್ಯಕ್ಷ ಮೊನೇಶ್ ಬಳ್ಳಾಪುರ್..!

ರಾಯಚೂರ: ರಾಯಚೂರು ಜಿಲ್ಲೆಯ ಸಿರವಾರ ತಾಲ್ಲೂಕಿನ ಕವಿತಾಳ ಪಟ್ಟಣದಲ್ಲಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಯುವಕ ಮಂಡಳಿ ವತಿಯಿಂದ ಇಂದು ಬೆಳಿಗ್ಗೆ 9:30 ಕ್ಕೆ ಅಂಬೇಡ್ಕರ್ ವೃತ್ತದ ಹತ್ತಿರ ಮಹಾನಾಯಕ ಧಾರಾವಾಹಿಯು ಯಶಸ್ವಿಯಾಗಿ ಮುಂದುವರಿಯಲೆಂದು ಹಾರೈಸಿ ಬ್ಯಾನೆರ್ ಗೆ ಪುಷ್ಪಾರ್ಚನೆ ಮಾಡಲಾಯಿತು.ಈ ಸಮಾರಂಭದಲ್ಲಿ ಮಾತನಾಡಿದ ಎಸ್ ಎಫ್ ಐ ನಗರ ಘಟಕದ ಅಧ್ಯಕ್ಷರಾದ ಮೌನೇಶ್ ಬುಳ್ಳಾಪುರ ರವರು ಮಾತನಾಡಿ ಈ ಒಂದು ಮಹಾನಾಯಕ ಧಾರಾವಾಹಿಯು ನಮ್ಮ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜೀವನಾಧಾರಿತ ಧಾರಾವಾಹಿಯಾಗಿದ್ದರಿಂದ ನಾವೆಲ್ಲರೂ ನೋಡಲೇಬೇಕು ಎಂದು ಕೇಳಿಕೊಂಡರು. ಬಾಬಾ ಸಾಹೇಬರ ಜೀವನ ಚರಿತ್ರೆಯನ್ನು ಪುಸ್ತಕ ಓದುವ ಮೂಲಕ ತಿಳಿದುಕೊಳ್ಳಬಹುದು ಆದರೆ ಅನಕ್ಷರಸ್ಥರಿಗೆ ಪುಸ್ತಕ ಓದಲು ಸಾಧ್ಯವಿಲ್ಲ ಆದುದರಿಂದ ಈ ರೀತಿಯಲ್ಲಿ ಧಾರವಾಹಿ ಮೂಲಕ ತೋರಿಸುವುದರಿಂದ ಎಲ್ಲರೂ ತಿಳಿದುಕೊಳ್ಳುತ್ತಾರೆ ಎಂದು ಹೇಳಿದರು. ಅದೇ ರೀತಿಯಲ್ಲಿ ಈ ಒಂದು ಮಹಾನಾಯಕ ಧಾರಾವಾಹಿಯು ಪ್ರಸಾರ ಮಾಡಬಾರದೆಂದು ಅನೇಕ ಬೆದರಿಕೆಗಳು ಜೀ ಕನ್ನಡ ವಾಹಿನಿಯ ಮ್ಯಾನೇಜಿಂಗ್ ಡೈರೆಕ್ಟರ್ ಆದ ರಾಘವೇಂದ್ರ ಹುಣಸೂರು ಇವರಿಗೆ ಬಂದಿದ್ದು ಅವರ ಜೊತೆಗೆ ನಾವಿದ್ದೇವೆ. ಎಂಬ ಹೇಳಿಕೆಯನ್ನು ನೀಡಿ ಬೆದರಿಕೆಯಿಂದ ಸತ್ಯ ಮುಚ್ಚಿಡಲು ಸಾಧ್ಯವಿಲ್ಲ ಎಂಬ ಮಾತಿನ ಮೂಲಕ ತಮ್ಮ ಮಾತಿಗೆ ವಿರಾಮ ನೀಡಿದರು.ಈ ಸಂದರ್ಭದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಯುವಕ ಮಂಡಳಿಯ ಸದಸ್ಯರಾದ ಆರ್ ಬಸವರಾಜ್ ರೋಡಲಬಂಡಿ, ಮಹದೇವ್ ಬುಳ್ಳಾಪುರ, ಮೌನೇಶ್ ಬುಳ್ಳಾಪುರ, ಮಲ್ಲಿಕಾರ್ಜುನ್ ಬುಳ್ಳಾಪುರ. ಶಂಕರ್ ಹಾಗೂ ವೆಂಕಟೇಶ್ನಾ, ಗಮೋಹನ್ ಸಿಂಗ್ಮ, ರಿಸ್ವಾಮಿ, ಮೌನೇಶ್ ಇತರರು ಉಪಸ್ಥಿತರಿದ್ದರು

ವರದಿ- ಸುಲ್ತಾನ್ ಬಾಬ ಎಕ್ಸ್ ಪ್ರೆಸ್ ಟಿವಿ ಸಿರವಾರ

Please follow and like us:

Related posts

Leave a Comment