ಗಾಂಜಾ ನಿರ್ಮೂಲನೆಗಾಗಿ ಕವಿತಾಳ ಪೊಲೀಸರ ಭರ್ಜರಿ ಕಾರ್ಯಾಚರಣೆ..!

ರಾಯಚೂರ: ರಾಯಚೂರು ಜಿಲ್ಲೆಯ ಕವಿತಾಳ ಪಟ್ಟಣದ ಪಕ್ಕದ ತಪ್ಪಲದೊಡ್ಡಿ ಗ್ರಾಮದಲ್ಲಿ ಊರ ಹೊರಗಿನ ಶ್ರೀ ಗುರು ಘಡಿ ವಡಕಿಶ್ವರಮಠದ ಮುಂದಿನ ಅವರಣದ ಖಾಲಿ ಜಾಗದಲ್ಲಿ ಅಪರಿಚಿತ ಆರೋಪಿತರು ಗಾಂಜಾವನ್ನು ಬೆಳಿದಿದ್ದಾರೆ. ಕರ್ನಾಟಕ ರಾಜ್ಯದಂತ ಸುದ್ದಿ ಮಾಡುತ್ತಿರುವ ಮಾದಕ ವಸ್ತುಗಳ ಪ್ರಕರಣ ಹಸಿಯಾಗಿರುವಾಗಲೇ ,ಇಂತಹ ಕೃತ್ಯಎಸಗಲು ಆರೋಪಿತರು ಹೊಸಮಾರ್ಗವನ್ನು ಅನುಸರಿಸಿ ಗುಡಿಯ ಖಾಲಿ ಜಾಗದಲ್ಲಿ ಗಾಂಜಾವನ್ನು ಬೆಳೆದಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೋಲಿಸರು ಆಗಮಿಸಿ ಸುಮಾರು 8ಕೆ.ಜಿ400 ಗ್ರಾಂ ನಷ್ಟು ಹಸಿ ಗಾಂಜಾವನ್ನು ವಶಕ್ಕೆ ಪಡೆದಿದ್ದಾರೆ. ರಾಯಚೂರು ಜಿಲ್ಲೆಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾದ ಶ್ರೀ ನಿಕ್ಕಂ ಪ್ರಕಾಶ , ಶ್ರೀ ಹರಿಬಾಬು , ಹೆಚ್ಚುವರಿ S P , ರಾಯಚೂರು,ಶ್ರೀ ವಿಶ್ವನಾಥ್ ಕುಲಕರ್ಣಿ DSP ಸಿಂಧನೂರು, ಇವರ ಮಾರ್ಗದರ್ಶನದಲ್ಲಿ , ಕವಿತಾಳ ಠಾಣಾ P S I ಶ್ರೀ ವೆಂಕಟೇಶ್M ಹಾಗೂ ಸಿಬ್ಬಂದಿಯವರಾದ, ರಾಜ್ ಮಹಮದ್ , ಮಲ್ಲಿಕಾರ್ಜುನ, ಸುರೇಶ್, ಅಶೋಕ್, ನಿಂಗಪ್ಪ ,ಹಾಗೂ ಬರ್ಮಾನ ಗೌಡ, ಶಂಕರ ರಾಥೋಡ್, ಇವರನ್ನು ಒಳಗೊಂಡ ತಂಡ ಕಾರ್ಯಾಚರಣೆ ಕೈಗೊಂಡು ಆರೋಪಿಗಳಿಗಾಗಿ ವ್ಯಾಪಕ ಬಲೆ ಬಿಸಿದ್ದು, ಕವಿತಾಳ ಪೊಲೀಸ್ ರ ಈ ಕಾರ್ಯಚರಣೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ವರದಿ- ಸುಲ್ತಾನ್ ಬಾಬ ಎಕ್ಸ್ ಪ್ರೆಸ್ ಟಿವಿ ಸಿರವಾರ

Please follow and like us:

Related posts

Leave a Comment