ನರೇಂದ್ರ ಮೋದಿಯವರ ಹುಟ್ಟುಹಬ್ಬದ ಅಂಗವಾಗಿ ಕೊರೊನಾ ಸೋಂಕಿತರಿಗೆ ಆಹಾರ ಕಿಟ್ ವಿತರಣೆ..!

ಮಳವಳ್ಳಿ: ಬಿಜೆಪಿ ಪಕ್ಷದ ತಾಲ್ಲೂಕು ಘಟಕದವತಿಯಿಂದ ಪ್ರದಾನಿ ನರೇಂದ್ರಮೋದಿರವರ 70 ನೇ ಹುಟ್ಟುಹಬ್ಬದ ಅಂಗವಾಗಿ ಕೋವಿಡ್ 19 ಸೋಂಕಿತರಿಗೆ ಆಹಾರ ಕಿಟ್ ವಿತರಣಾ ಕಾರ್ಯಕ್ರಮ ಮಳವಳ್ಳಿ ಪಟ್ಟಣದಲ್ಲಿ ನಡೆಸಲಾಯಿತು. ಪಟ್ಟಣದ ಸಾರ್ವಜನಿಕ ಆಸ್ವತ್ರೆಯಲ್ಲಿರುವ ಕೋವಿಡ್ 19 ಸೆಂಟರ್ ನಲ್ಲಿರುವ ಸೋಂಕಿತರಿಗೆ ಹಾಗೂ ವಡ್ಡರಹಳ್ಳಿ ಗ್ರಾಮದ ವಸತಿ ಶಾಲೆಯಲ್ಲಿರುವ ಸೋಂಕಿತರಿಗೆ ಸುಮಾರು 100 ಕ್ಕೂ ಹೆಚ್ಚು ಆಹಾರ ಕಿಟ್ ವಿತರಿಸಲಾಯಿತು. ಇನ್ನೂ ತಾಲ್ಲೂಕು ಬಿಜೆಪಿ ಅಧ್ಯಕ್ಷ ಎಂ.ಎನ್ ಕೃಷ್ಣ ಮಾತನಾಡಿ, ದೇಶವನ್ನು ಮುನ್ನಡೆಸುತ್ತಿರುವ ನಮ್ಮ ನೆಚ್ಚಿನ ನಾಯಕರು ಪ್ರದಾನಮಂತ್ರಿ ನರೇಂದ್ರ ಮೋದಿರವರು 70 ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ರಾಜ್ಯ ವ್ಯಾಪ್ತಿ ಸೇವಾ ಕಾರ್ಯ ಎಂಬ ವಿಶೇಷ ಕಾರ್ಯಕ್ರಮದಲ್ಲಿ ಸ್ವಚ್ಚತಾ ಕಾರ್ಯ, ಹಾಗೂ ಕೋವಿಡ್ 19 ಸೋಂಕಿತರಿಗೆ ಆಹಾರ ವಿತರಿಸುವಂತೆ ಪ್ರಧಾನಿ ನರೇಂದ್ರ ಮೋದಿ ಸೂಚನೆ ನೀಡಿದ ಹಿನ್ನಲೆಯಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಗುಜರಾತ್ ರಾಜ್ಯದಲ್ಲಿ ಮೂರು ಅವಧಿಗೆ ಮುಖ್ಯಮಂತ್ರಿಯಾಗಿ ಅಲ್ಲಿನ ಅಭಿವೃದ್ಧಿಗೆ ಹಲವಾರು ಯೋಜನೆ ಜಾರಿಗೆ ತಂದು, ರಾಷ್ಟ್ರ ರಾಜಕಾರಣಕ್ಕೆ ಹೆಜ್ಜೆ ಇಟ್ಟು ದೇಶದ ಜನತೆಯ ಮನ ಗೆದ್ದು 2 ನೇ ಪ್ರಧಾನಿಯಾಗಿದ್ದಾರೆ ಎಂದರು. ಪ್ರಧಾನಿ ನರೇಂದ್ರ ಮೋದಿಯವರ ಆಡಳಿತವನ್ನು ಮೆಚ್ಚಿ ಅವರು ಹಾಕಿಕೊಟ್ಟಿರುವ ಹಾದಿಯಲ್ಲಿ ನಡೆಯುತ್ತಿದ್ದು, ಅವರ ಹುಟ್ಟುಹಬ್ಬದ ಅಂಗವಾಗಿ ಇಂದು ಕೋವಿಡ್ 19 ರೋಗಿಗಳಿಗೆ ಮಧ್ಯಾಹ್ನದ ಊಟವನ್ನು ತಾಲೂಕಿನ ಎಲ್ಲಾ ಕೋವಿಡ್ 19 ಕೇಂದ್ರಗಳಲ್ಲಿ ವಿತರಿಸಲಾಗುತ್ತಿದೆ ಎಂದು ಹೇಳಿದರು.ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಾಗಿರುವ ಕೋವಿಡ್ 19 ರೋಗಿಗಳಿಗೆ ತಾಲ್ಲೂಕು ಬಿಜೆಪಿ ಘಟಕದಿಂದ ಮಧ್ಯಾಹ್ನದ ಊಟವನ್ನು ಡಾ. ಶಿವಕುಮಾರ್ ರವರಿಗೆ ಹಸ್ತಾಂತರಿಸಿ ವಿತರಣೆ ಮಾಡಲಾಯಿತು.ಇದೇ ವೇಳೆ ವಿಧಾನ ಸಭಾ ಪರಾಜಿತ ಅಭ್ಯರ್ಥಿ ಕುಮಾರಸ್ವಾಮಿ,ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೆಸಿ ನಾಗೇಗೌಡ, ಮುಖಂಡರಾದ ಅಶೋಕ್ ಕುಮಾರ್,ಎಸ್ ಟಿ ಮೋರ್ಚಾ ಜಿಲ್ಲಾಧ್ಯಕ್ಷ ದೇವರಾಜು,ರಾಜಣ್ಣ, ಶಿವಲಿಂಗಯ್ಯ ಸೇರಿದಂತೆ ಮತ್ತಿತ್ತರರು ಭಾಗಿಯಾಗಿದ್ದರು.

ವರದಿ- ಎ.ಎನ್ ಲೋಕೇಶ್ ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ

Please follow and like us:

Related posts

Leave a Comment