ಅಕ್ರಮ ಮರಳು ಅಡಿಯ ಮೇಲೆ ದಾಳಿ. ಟ್ರ್ಯಾಕ್ಟರ್ ವಶಕ್ಕೆ. ಚಾಲಕ ಪರಾರಿ…!

ಸಿಂಧನೂರು: ತಾಲೂಕಿನ ಗೊಣ್ಣಿಗನೂರು ದಲ್ಲಿ ಹಳ್ಳದಲ್ಲಿ ಅಕ್ರಮ ಮರಳು ದಂದೆ ಜೋರಾಗಿ ನಡೆಯುತ್ತದೆ. ಕಳೆದ ಕೆಲವು ದಿನಗಳ ಹಿಂದೆ ಅಲಬನೂರು ಗ್ರಾಮದಲ್ಲಿ ಅಕ್ರಮ ಮರಳು ದಂದೆಯಲ್ಲಿ ತೊಡಗಿದ ಟ್ರ್ಯಾಕ್ಟರ್ ನಿಂದ 15 ವರ್ಷದ ಬಾಲಕ ಬಲಿಯಾಗಿ ದರು. ಈ ಗೊಣ್ಣಿಗನೂರು ಗ್ರಾಮದಲ್ಲಿ ಅಕ್ರಮ ಮರಳು ಗಾರಿಕೆ ನಿಂತಿಲ್ಲ.ಇಂದು ಖಚಿತ ಮಾಹಿತಿ ಮೇರೆಗೆ ಗ್ರಾಮೀಣ ಪೋಲಿಸ್ ಠಾಣೆಯ ಪಿ.ಎಸ್. ಐ ರಾಘವೇಂದ್ರ, ಹಾಗೂ ಅವರ ಸಿಬ್ಬಂದಿ ಗಳಾದ ಶೇಟೆಪ್ಪ, ಮತ್ತು ದಂಡವು ಗೊಣ್ಣಿಗನೂರು ಗ್ರಾಮ ಹಳ್ಳದಲ್ಲಿ ಅಕ್ರಮವಾಗಿ ಟ್ರ್ಯಾಕ್ಟರ್ ಮರಳು ತುಂಬುತ್ತಿದ್ದವರ ಮೇಲೆ ದಾಳಿ ಮಾಡಿದಾಗ ಚಾಲಕ ಹಾಗೂ ಮಾಲಿಕ ಟ್ರ್ಯಾಕ್ಟರ್ ಬಿಟ್ಟು ಪರಾರಿ ಯಾಗಿದಾನೆ. ಟ್ರಾಕ್ಟರ್ ಮಾಲಿಕ ಹೆಸರು ಅಮರೇಶ್( ಹನುಮಂತ) ತಂದೆ ಅಮರಪ್ಪ ಎಂದು ತಿಳಿದು ಬಂದಿದೆ.ಈ ಕುರಿತು ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವರದಿ-ಸೈಯದ್ ಬಂಧೇನವಾಜ್ ಎಕ್ಸ್ ಪ್ರೆಸ್ ಟಿವಿ ಸಿಂಧನೂರು.

Please follow and like us:

Related posts

Leave a Comment