ಬಹುಜನ ಸಮಾಜ ಪಕ್ಷದ ವತಿಯಿಂದ ವಿಶ್ವಕರ್ಮ ಜಯಂತಿ ಆಚರಣೇ..!

ಮಳವಳ್ಳಿ : ಬಹುಜನ ಸಮಾಜ ಪಕ್ಷದ ವತಿಯಿಂದ ವಿಶ್ವಕರ್ಮ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಮಳವಳ್ಳಿ ತಾಲ್ಲೂಕಿನ ಹಲಗೂರುಗ್ರಾಮದ ಬಹುಜನ ಸಮಾಜ ಪಕ್ಷದ ಕಚೇರಿಯಲ್ಲಿ ಆಚರಿಸಲಾಯಿತು.ಜಿಲ್ಲಾ ಘಟಕದ ಅದ್ಯಕ್ಷ ಎಚ್.ಸಿ. ಸತೀಶ್ ಮಾತನಾಡಿ ಮನಸ್ಸಿಗೆ ಬಂದ ಕಲ್ಪನೆಗಳಿಗೆ ರೂಪ ಕೊಡುವ ಅದ್ಭುತ ಕಲ್ಪನಾ ಕಲೆ ವಿಶ್ವಕರ್ಮ ಸಮುದಾಯದಲ್ಲಿದೆ. ದೇವಸ್ಥಾನಗಳೂ ಸೇರಿದಂತೆ ದೇಶದ ಲಕ್ಷಾಂತರ ಐತಿಹಾಸಿಕ ಸ್ಮಾರಕಗಳು ವಿಶ್ವಕರ್ಮರಿಂದಲೇ ರಚನೆಗೊಂಡಿವೆ. ಕಲೆಯನ್ನು ರಕ್ತಗತವಾಗಿಸಿಕೊಂಡಿರುವ ವಿಶ್ವಕರ್ಮ ಸಮುದಾಯಕ್ಕೆ ಆಳುವ ಸರ್ಕಾರಗಳು ಸೂಕ್ತ ಸ್ಥಾನಮಾನ ಹಾಗೂ ನೆರವು ನೀಡುವ ಮೂಲಕ ಸಾಮಾಜಿಕವಾಗಿ ಅಭಿವೃದ್ಧಿ ಪಡಿಸಬೇಕೆಂದು ಆಗ್ರಹಿಸಿದರು.ವಿಶ್ವ ಕರ್ಮ ಮಹಾ ಸಭಾ ಹಲಗೂರು ಹೋಬಳಿ ಘಟಕದ ಅದ್ಯಕ್ಷ ಕುಮಾರ್ ಮಾತನಾಡಿ ಕಬ್ಬಿಣ, ಮರಗೆಲಸ, ಚಿನ್ನಾಭರಣ ಸೇರಿದಂತೆ ಶಿಲ್ಪಕೆಲಸವನ್ನು ಮಾಡುತ್ತಿದ್ದು, ಸರ್ವ ಸಮುದಾಯದ ಸೇವೆಗೆ ಶ್ರಮಿಸುತ್ತಿದ್ದಾರೆ. ಕಾಯಕ ಸಮಾಜವಾಗಿರುವ ವಿಶ್ವಕರ್ಮ ಸಮುದಾಯ ಆಳುವ ಸಮುದಾಯದ ಭಾಗವಾಗಬೇಕಿದೆ ಎಂದರು.ಈ ಸಂದರ್ಭದಲ್ಲಿ ತಾಲೋಕು ಉಸ್ತುವಾರಿ ಎಚ್.ಎನ್. ವೀರಭದ್ರಯ್ಯ, ತಾಲ್ಲೂಕು ಕಾರ್ಯ ದರ್ಶಿಗಳಾದ ಉಮೇಶ್ ಎಸ್.ಮೌರ್ಯ,ಶಿವಮೂರ್ತಿ, ಮುಖಂಡರಾದ ಬಿ.ಎಸ್.ತಮ್ಮಯ್ಯ, ಎಚ್.ಮಹೇಶ್, , ಸಿದ್ದಲಿಂಗಮೂರ್ತಿ, ಶಿವಕುಮಾರ್, ವೆಂಕಟೇಶ್, ರಾಜು, ಸೇರಿದಂತೆ ಹಲವರು ಇದ್ದರು.

ವರದಿ-ಎ.ಎನ್ ಲೋಕೇಶ್ ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ

Please follow and like us:

Related posts

Leave a Comment