ಮತಾಂತರ ಮಾಡಿಕೊಂಡ್ರಾ ನಟಿ ಸಂಜನಾ ಗಲ್ರಾನಿ..?

ಬೆಂಗಳೂರು : ಸ್ಯಾಂಡಲ್ವುಡ್ ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ನಟಿ ಸಂಜನಾ ಗಲ್ರಾನಿ ಮತಾಂತರವಾಗಿದ್ದಾರೆ ಎಂಬ ಮಾಹಿತಿ ಇದೀಗ ಹೊರ ಬಂದಿದೆ. ಈ ಹಿಂದೆ ವೈದ್ಯರಾಗಿರುವ ಡಾ.ಅಜೀಝ್ ಪಾಷಾ ಅವರ ಜೊತೆ ವಿವಾಹವಾಗಿರುವ ಫೋಟೋ ಇತ್ತೀಚೆಗೆ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಇದೀಗ ಸಂಜನಾ ಗಲ್ರಾನಿ ಮತಾಂತರಗೊಂಡಿರುವ ಬಗ್ಗೆ ಮಾಹಿತಿ ಬಹಿರಂಗವಾಗಿದೆ. ಇನ್ನು ಬಂಧನಕ್ಕೂ ಮುನ್ನ ನನಗೆ ಮದುವೆಯಾಗಿಲ್ಲ, ನನ್ನ ಕ್ಯಾರೆಕ್ಟರ್ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಮಾಧ್ಯಮದ ಮುಂದೆ ಅಳಲು ತೋಡಿಕೊಂಡಿದ್ದರು. ಆದರೆ ಆ ಬಳಿಕ ಸಂಜನಾ, ವೈದ್ಯ ಅಜೀಝ್ ಪಾಷಾ ಜೊತೆ ವಿವಾಹವಾಗಿರುವ ಫೋಟೊ ವೈರಲ್ ಆಗಿತ್ತು. ಡಾ.ಅಜೀಝ್ ಪಾಷಾ ಪರಿಚಯವಾದ ಬಳಿಕ ಸಂಜನಾ ಮತಾಂತರಗೊಂಡಿದ್ದಾರೆ ಎನ್ನಲಾಗಿದೆ.

ವರದಿ-ಸುಪ್ರಿಯಾಶರ್ಮಾ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Please follow and like us:

Related posts

Leave a Comment