ಮಹಾನಾಯಕ ಬ್ಯಾನರ್ಗೆ ಹಾಲಿನಭಿಷೇಕ, ಪೌರಾಕಾರ್ಮಿಕರ ಪಾದಕ್ಕೆ ನಮಸ್ಕರಿಸಿದ ಹನುಮಂತ ಕೋಟೆ..!

ರಾಯಾಚೂರು: ರಾಯಚೂರು ಜಿಲ್ಲೆಯ ಮಾನವಿ ತಾಲ್ಲೂಕಿನಲ್ಲಿ ಇಂದು ಮಹಾ ನಾಯಕ ಧಾರವಾಹಿಯನ್ನು ಜೀ ಕನ್ನಡ ವಾಹಿನಿ ಮುಖ್ಯಸ್ಥರಾದ ರಾಘವೇಂದ್ರ ಹುಣಸೂರು,, ಇವರಿಗೆ ಕೆಲವರು ಬೆದರಿಕೆ ಹಾಕಿರುವುದಕ್ಕಾಗಿ ನಾವು ಕರ್ನಾಟಕ ಆದಿಜಾಂಬವ ಜನಸಂಘದ ಜಿಲ್ಲಾ ಅಧ್ಯಕ್ಷರಾದ ಹನುಮಂತ ಕೋಟೆ ಸದಾ ನಿಮಗೆ ಬೆನ್ನೆಲುಬಾಗಿ ನಿಲ್ಲುತ್ತವೆ ಎಂದು ಹೇಳಿದ್ದಾರೆ.ನಂತರ ಮಾನ್ವಿಯ ಡಾಕ್ಟರ್ ಬಾಬಾ ಸಾಹೇಬ್ ವೃತ್ತದಲ್ಲಿ ಅವರ ಮಹಾನಾಯಕ ಬ್ಯಾನರ್ಗೆ ಹಾಲಿನ ಅಭಿಷೇಕ ಮಾಡುಲಾಯಿತು.ಮತ್ತೆ ಕೊರೋನಾ ಮಹಾಮಾರಿಯನ್ನು ಲೆಕ್ಕಿಸದೆ ಪ್ರಾಣವನ್ನು ಬದಿಗೊತ್ತಿ ಸೇವೆ ಮಾಡುವ ಪೌರಕಾರ್ಮಿಕರ ಪಾದಕ್ಕೆ ನಮಸ್ಕರಿಸುತ್ತಾ , ವಿಶೇಷ ಗೌರವ ಸಲ್ಲಿಸಲಾಯಿತು.ಹಾಗೂ ಸಾರ್ವಜನಿಕರಿಗೆ ಹಾಲು ವಿತರಣೆ ಮಾಡಲಾಯಿತು.ಈ ಸಂದರ್ಭದಲ್ಲಿ ಕರ್ನಾಟಕ ಆದಿಜಾಂಬವ ಜನಸಂಘ ಜಿಲ್ಲಾಧ್ಯಕ್ಷರಾದ ಹನುಮಂತ ಕೋಟೆ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಲೋಹಿತ್ ಕುಮಾರ್ ಹಾಗೂ ಚಂದ್ರಶೇಖರ ಮದ್ಲಾಪೂರ ವಕೀಲರು ಹಾಗೂ ಪತ್ರಕರ್ತರು ಪರಶುರಾಮ್ ಚೌಡಕಿ ಪತ್ರಕರ್ತರು ಹಾಗೂ ಹಿರಿಯ ಆರೋಗ್ಯ ನಿರೀಕ್ಷಕರು ಹಾಗೂ ಪೌರ ನೌಕರರ ಸಂಘದ ಅಧ್ಯಕ್ಷರಾದ ಕೆ ಸಾರ್ ಸಿದ್ದು ಚಿಲ್ಲಾಪುರ ಹಾಗೂ ಪ್ರವೀಣ್ ಜವಳಗೇರ ಇನ್ನೂ ಅನೇಕರು ಭಾಗವಹಿಸಿದ್ದರು.

ವರದಿ- ಸುಲ್ತಾನ್ ಬಾಬ ಎಕ್ಸ್ ಪ್ರೆಸ್ ಟಿವಿ ಮಾನವಿ

Please follow and like us:

Related posts

Leave a Comment