ಕೊನೆಗೂ ಕಳ್ಳನನ್ನು ಬಂಧಿಸಿದ ಆಳಂದ ಪೋಲಿಸರು..!

ಕಲಬುರಗಿ: ಜಿಲ್ಲೆಯ ಆಳಂದ ತಾಲೂಕಿನ ಮಾದನಹಿಪ್ಪರಗಾ ಹಾಗೂ ನಿಂಬರ್ಗಾ ಗ್ರಾಮದಲ್ಲಿ ನಡೆದ 6 ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಾಪುರ ಮೂಲದ ಕುಖ್ಯಾತ ಅಂತರ ಜಿಲ್ಲಾ ಕಳ್ಳನನ್ನು ಆಳಂದ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಈ ಹಿಂದೆ ಕಳ್ಳತನ ಪ್ರಕರಣದಲ್ಲಿ ಶಿಕ್ಷೆ ಅನುಭವಿಸಿ ಬಿಡುಗಡೆ ಆಗಿದ್ದ ಬಂಧಿತನಿಂದ 7.96 ಲಕ್ಷ ರೂಪಾಯಿಯ 157 ಗ್ರಾಂ ಬಂಗಾರ 230ಗ್ರಾಂ ಬೆಳ್ಳಿ ವಶಪಡಿಸಿಕೊಂಡು ನ್ಯಾಯಂಗ ಬಂಧನಕ್ಕೆ ಒಪ್ಪಿಸಲಾಗಿದೆ .ಕಲಬುರಗಿ ಜಿಲ್ಲಾ ಆರಕ್ಷಕ ಅಧಿಕ್ಷಕರಾದ ಡಾ.ಸಿಮಿ ಮರಿಯಮ್ ಜಾರ್ಜ್ ಹೆಚ್ಚುವರಿ ಪೋಲಿಸ್ ಅಧಿಕ್ಷಕರಾದ ಪ್ರಸನ್ನ ದೇಸಾಯಿ ಮಾರ್ಗ ದರ್ಶನಲ್ಲಿ ಆಳಂದ ಡಿವೈಎಸ್ಪಿ ಮಲ್ಲಿಕಾರ್ಜುನ ಸಾಲಿ ನೇತೃತ್ವದಲ್ಲಿ ಸಿಪಿಐ ಮಂಜುನಾಥ್ ಎಸ್ ನಿಂಬರ್ಗಾ ಪಿ.ಎಸ್.ಐ ಸುರೇಶಕುಮಾರ ಚವ್ವಾಣ ಹಾಗೂ ಸಿಬ್ಬಂದಿಗಳು ದಾಳಿ ಮಾಡಿ ಆರೋಪಿಯನ್ನು ಬಂಧಿಸಿದ್ದಾರೆ.

ವರದಿ- ಡಾ.ರಾಜಕುಮಾರ ಹಿರೇಮಠ ಎಕ್ಸ್ ಪ್ರೆಸ್ ಟಿವಿ ಆಳಂದ

Please follow and like us:

Related posts

Leave a Comment