ವಿಧಾನಸೌದ ಚಲೋ ಕಾರ್ಯಕ್ರಮಕ್ಕೆ ಬಸ್ ನಲ್ಲಿ ತೆರಳಿದ ಮಳವಳ್ಳಿ ರೈತರು..!

ಮಳವಳ್ಳಿ: ಭೂ ಸುಧಾರಣೆ , ವಿದ್ಯುತ್, ಹಾಗೂ ಎಪಿಎಂಸಿ ಕಾಯ್ದೆ ವಿರೋದಿಸಿ ಕರ್ನಾಟಕ ಪ್ರಾಂತ ರೈತಸಂಘ, ಹಾಗೂ ವಿವಿಧ ರೈತ ಸಂಘಟನೆಗಳು ಇಂದು ನಡೆಯಲಿರುವ ವಿಧಾನಸೌದ ಚಲೋ ಕಾರ್ಯಕ್ರಮಕ್ಕೆ ಬಸ್ ನಲ್ಲಿ ಮಳವಳ್ಳಿ ಪಟ್ಟಣದಿಂದ ಬಸ್ ನಲ್ಲಿ ಬೆಂಗಳೂರಿಗೆ ತೆರಳಿದರು. ಕರ್ನಾಟಕ ಪ್ರಾಂತ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಎನ್ .ಎಲ್ ಭರತ್ ರಾಜ್ ನೇತೃತ್ವದಲ್ಲಿ ನೂರಾರು ರೈತರು ಕೇಂದ್ರ ಹಾಗೂ ರಾಜ್ಯ ಸರ್ಕಾರ ವಿರುದ್ದ ಘೋಷಣೆ ಕೂಗಿದರು.ಇನ್ನೂ ಕರ್ನಾಟಕ ಪ್ರಾಂತ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಎನ್ .ಎಲ್ ಭರತ್ ರಾಜ್ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತ ವಿರೋಧ ನೀತಿಯಾದ ಭೂ ಸುಧಾರಣೆ , ವಿದ್ಯುತ್ , ಹಾಗೂ ಎಪಿಎಂಸಿ ಕಾಯ್ದೆಯನ್ನು ಜಾರಿಗೆ ತರಲು ಹೊರಡಿದ್ದು.ಈ ಕಾಯ್ದೆ ಉಳ್ಳವರು ಅನುಕೂಲವಾಗುವ ಕಾಯ್ದೆಯಾಗಿದ್ದು, ಇದರಿಂದ ಶ್ರೀಮಂತರು ಮತ್ತಷ್ಟು ಶ್ರೀಮಂತರಾಗುತ್ತಾರೆ ಹೊರತು ಬಡವರು ಬಡವರಾಗಿಯೇ ಇರುತ್ತಾರೆ. ಈ ನೀತಿ ಹೋಗಬೇಕು ಅದಕ್ಕಾಗಿ ರೈತರು ಎಲ್ಲರೂ ವಿಧಾನಸೌದ ಚಲೋ ಹಮ್ಮಿಕೊಂಡು ಸರ್ಕಾರದ ಗಮನಕ್ಕೆ ರೈತರು ಹೊರಟಿದ್ದೇವೆ ಎಂದರು.ಈ ಸಂಧರ್ಭದಲ್ಲಿ ಪ್ರಾಂತ ರೈತ ಸಂಘದ ಪ್ರಧಾನಕಾರ್ಯದರ್ಶಿ ಲಿಂಗರಾಜುಮೂರ್ತಿ, ಮಂಜುಳ, ಪ್ರಮೀಳ, ನಾಗಮಣಿ,, ಚಿಕ್ಕಮೊಗ್ಗಣ್ಣ, ಶಾಂತರಾಜ್, ಶಿವಣ್ಣ, ಕರಿಯಪ್ಪ, ಸ್ವಾಮಿ, ಮಹದೇವು ಸೇರಿದಂತೆ ವಿವಿಧ ರೈತ ಮುಖಂಡರು ಭಾಗವಹಿಸಿದ್ದರು.

ವರದಿ- ಎ.ಎನ್ ಲೋಕೇಶ್ ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ

Please follow and like us:

Related posts

Leave a Comment