ವಿಶೇಷವಾಗಿ ಮಗಳ ಜನ್ಮದಿನ ಆಚರಿಸಿದ ದಂಪತಿ..!

ಹುಬ್ಬಳ್ಳಿ- ತಂದೆ ತಾಯಿಗೆ ಮಕ್ಕಳ ಹುಟ್ಟು ಹಬ್ಬ ಎಂದರೆ ಸಾಕು, ಎಲ್ಲಿಲ್ಲದ ಸಂಭ್ರಮ ಸಡಗರ, ಆದರೆ ಇಲ್ಲೊಂದು ದಂಪತಿ ತಮ್ಮ ಮಗಳ ಜನ್ಮದಿನವನ್ನು ವಿಶೇಷವಾಗಿ ಆಚರಿಸುವುದರ ಮೂಲಕ ಮಾದರಿಯಾಗಿದ್ದಾರೆ. ಈಶ್ವರ ನಗರದ ನಿವಾಸಿಯಾದ ಸಮಾಜ ಸೇವಕ ಮಂಜುನಾಥ ಹೆಬಸೂರ ದಂಪತಿ. ತಮ್ಮ ಮಗಳ ಒಂದನೇ ವರ್ಷದ ಜನ್ಮದಿನದಂದು ನಗರದ ಚನ್ನಮ್ಮ ವೃತ್ತದ ಬಳಿ, ಹೆಲ್ಮೆಟ್ ಧರಿಸದ ಬೈಕ್ ಸವಾರರಿಗೆ ಹೆಲ್ಮೆಟ್ ನೀಡುವುದರ ಮೂಲಕ ಅಪಘಾತ ಜಾಗೃತಿ ಮೂಡಿಸಿದರು.

ವರದಿ- ರಾಜುಮುದುಗಲ್ ಎಕ್ಸ್ ಪ್ರೆಸ್ ಟಿವಿ ಹುಬ್ಬಳ್ಳಿ

Please follow and like us:

Related posts

Leave a Comment