ವಿಧಾನಸೌಧದಲ್ಲೇ ಕೈ ಕೈ ಮಿಲಾಯಿಸಲು ಮುಂದಾದ ಶಾಸಕ ಹಾಗು ಸಚಿವ..!

ಬೆಂಗಳೂರು : ರಾಜ್ಯದಲ್ಲಿ ಇಂದಿನಿಂದ ವಿಧಾನ ಮಂಡಲ ಅಧಿವೇಶನ ಆರಂಭವಾಗಿದ್ದು, ವಿಧಾನಸೌಧಲ್ಲೇ ಬಿಜೆಪಿಯ ಒಳಜಗಳ ಸ್ಫೋಟಗೊಂಡಿದೆ.ವಿಧಾನಸೌಧದ ಸೆಂಟ್ರಲ್ ಲಾಂಚ್‌ನಲ್ಲಿ ಕಡೂರು ಶಾಸಕ ಬೆಳ್ಳಿ ಪ್ರಕಾಶ್ ಹಾಗು ಸಚಿವ ನಾರಾಯಣಗೌಡ ವಿರುದ್ಧ ಗಲಾಟೆ ನಡೆದಿದ್ದು, ಮಾತಿನ ಚಕಮಕಿ ನಡೆದಿದೆ ಎನ್ನಲಾಗಿದೆ. ನೀನೇನು ಅಂತ ನನಗೆ ಗೊತ್ತು, ಅಸಮರ್ಥ ಸಚಿವ ನೀನು ಎಂದು ಸಚಿವ ನಾರಾಯಣಗೌಡ ವಿರುದ್ಧ ಶಾಸಕ ಬೆಳ್ಳಿ ಪ್ರಕಾಶ್ ಆರೋಪ ಮಾಡಿದ್ದಾರೆ. ಈ ವೇಳೆ ಅಲ್ಲೇ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗು ಸಚಿವರಾದ ಈಶ್ವರಪ್ಪ, ಸೋಮಣ್ಣ ಕೂಡ ಇದ್ದರು ಎನ್ನಲಾಗಿದೆ.

ವರದಿ- ನ್ಯೂಸ್ ಡೆಸ್ಕ್ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Please follow and like us:

Related posts

Leave a Comment