ಬೊಲೆರಾ –ಕೆಎಸ್ ಆರ್ ಟಿಸಿ ಬಸ್ ಮುಖಾಮುಖಿ ಡಿಕ್ಕಿ- ಸ್ಥಳದಲ್ಲೇ ಓರ್ವ ವ್ಯಕ್ತಿ ಮೃತ..!

ತಿಪಟೂರು: ಯಗಟಿಯಲ್ಲಿ ಮದುವೆ ಕಾರ್ಯಕ್ರಮಕ್ಕೆಂದು ಬೊಲೆರೋ ವಾಹನದಲ್ಲಿ ಜನರು ತೆರಳಿದ್ದು, ಮದುವೆ ಮುಗಿಸಿಕೊಂಡು ಹಿಂತಿರುಗುತ್ತಿದ್ದಾಗ ಮಧ್ಯಾಹ್ನ ತಿಪಟೂರು ಕೋಟನಾಯಕನಹಳ್ಳಿ ಬಳಿ ಕೆಎಸ್ಆರ್‌ಟಿಸಿ ಹಾಗೂ ಬೊಲೆರೋ ವಾಹನ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು, ಅಪಘಾತದಲ್ಲಿ ಬೊಲೆರೋ ಚಾಲಕ 22 ವರ್ಷದ ಬಿಜಾಪುರದ ಬಸವರಾಜು ಹಾಗೂ ಹುಳಿಯಾರಿನ ಪಾನಿಪುರಿ ಮಂಜಣ್ಣನ ಮಗ 23 ವರ್ಷದ ಎಂ.ರಾಘವೇಂದ್ರ ಎಂಬಾತ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನಿಬ್ಬರಿಗೆ ಗಂಭೀರ ಗಾಯಾಗಳಾಗಿದ್ದು ಹತ್ತಿರದ ತಿಪಟೂರಿನ ಜನರಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೂ ಸ್ಥಳಕ್ಕೆ ಸ್ಥಳೀಯ ಪೋಲಿಸರು ಭೇಟಿನೀಡಿದ್ದು ಪರೀಶಿಲನೆ ನಡೆಸುತ್ತಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವರದಿ- ಸಿದ್ದೇಶ್ವರ ಸಿಎನ್ ಎಕ್ಸ್ ಪ್ರೆಸ್ ಟಿವಿ ತಿಪಟೂರು.

Please follow and like us:

Related posts

Leave a Comment