ಸದಾಶಿವ ಆಯೋಗದ ವರದಿ ಕೇಂದ್ರಕ್ಕೆ ಶಿಫಾರಸು ಮಾಡಬಾರದೆಂದು ಒತ್ತಾಯಿಸಿ ಪ್ರತಿಭಟನೆ…..

ಸಿಂಧನೂರು: ನಗರದ ಪ್ರವಾಸಿ ಮಂದಿರ ದಿಂದ ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟ ವತಿಯಿಂದ ತಹಶಿಲ್ದಾರ ಕಚೇರಿ ವರೆಗೆ ಬೃಹತ್ ಪ್ರಮಾಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು,ಕೊರಮ,ಕೊರಚ, ಭೋವಿ, ವಡ್ಡರ,ಲಂಬಾಣಿ,ಸಮುದಾಯಗಳು ಪರಿಶಿಷ್ಟ ಜಾತಿ ಪಟ್ಟಿಯಿಂದ ತೆಗೆದು ಹಾಕಬೇಕೆಂದು ಅನಗತ್ಯ ಚರ್ಚೆ ಹುಟ್ಟು ಹಾಕಿ ನಮ್ಮ ಐಕ್ಯತೆಯನ್ನು ಛಿದ್ರಗೊಳಿಸಲು ಹಾಗೂ ಹೋರಾಟಗಳನ್ನು ಹತ್ತಿಕ್ಕುವ ದುರುದ್ದೇಶದಿಂದಾಗಿ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಜಾರಿಗೊಳಿಸಲು ಒತ್ತಾಯಿಸುತ್ತಿವೆ ಕಾರಣ ಈ ವರದಿ ಜಾರಿಗೊಳಿಸಿದರೆ 99 ಸಮುದಾಯಗಳಿಗೆ ಅನ್ಯಾಯವಾಗುತ್ತದೆ ಅದಕ್ಕಾಗಿ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನು ವಿಧಾನ ಮಂಡಲ ಅಧಿವೇಶನದಲ್ಲಿ ಚರ್ಚೆ ನಡೆಸದೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬಾರದು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು ಈ ಸಂದರ್ಭದಲ್ಲಿ ಹಂಸರಾಜ್ ಮಾಡಶಿರವಾರ ,ವಿ ಕಾಶಪ್ಪ,ಕೃಷ್ಣಪ್ಪ ರಾಠೋಡ್, ಅಶೋಕ ಉಮಲೂಟಿ ,ಕೆಎಸ್ ಮರಿಯಪ್ಪ ,ರಾಮಕೃಷ್ಣ ಭಜಂತ್ರಿ, ಗೋವಿಂದರಾಜ ಸೋಮಲಾಪುರ, ರವಿ ರಾಠೋಡ್, ಹನುಮೇಶ್, ರಾಜು ಚೌಹಾಣ್, ಸೇರಿದಂತೆ ಇತರರು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ವರದಿ- ಸೈಯದ್ ಬಂಧೇನವಾಜ್ ಎಕ್ಸ್ ಪ್ರೆಸ್ ಟಿವಿ ಸಿಂಧನೂರು

Please follow and like us:

Related posts

Leave a Comment