ಮಿಂಚಿನ ಕಾರ್ಯಚರಣೆ ಗಾಂಜಾ ಮಾರುತ್ತಿದ್ದ ವ್ಯಕ್ತಿಯ ಬಂಧನ-ಎಸ್.ಪಿ. ಮೆಚ್ಚುಗೆ….!

ಸಿಂಧನೂರು: ಕರ್ನಾಟಕ ರಾಜ್ಯಾದ್ಯಂತ ತಲ್ಲಣಗೊಳಿಸಿರುವ ಮಾದಕ ದ್ರವ್ಯ ಪ್ರಕರಣವು ಮಾಸುವ ಮುನ್ನವೇ. ರಾಯಚೂರು ಜಿಲ್ಲೆಯ ಸಿಂಧನೂರು ತಾಲುಕಿನ ತುರುವಿಹಾಳ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಮಸ್ಕಿ ತಾಲುಕಿನ ಗದ್ರಟಿಗಿ ಗ್ರಾಮದಲ್ಲಿ ಗಂಗಣ್ಣ ತಂದೆ ಸೋಮಣ್ಣ (60) ವರ್ಷ ತನ್ನ ಮನೆಯ ಹಿತ್ತಲಿನಲ್ಲಿ ಬೆಳೆದ 4 ಗಾಂಜಾ ಗಿಡಗಳನ್ನು ಪಂಚರು ಮಾಡಿ ಒಟ್ಟು 2- ಕೆ.ಜಿ.600 ಗ್ರಾಂ ವಶಕ್ಕೆ ತೆಗೆದುಕೊಂಡು ಆರೋಪಿಯನ್ನು ದಸ್ತಗಿರಿ ಮಾಡಿ ಪ್ರಕರಣ ದಾಖಲೆ ಮಾಡಲಾಗಿದೆ.ಸದರಿ ಕಾರ್ಯಾಚರಣೆಯಲ್ಲಿ ಎಸ್.ಪಿ. ಶ್ರೀ ನಿಕ್ಕಮ್ ಪ್ರಕಾಶ ಅಮ್ರಿತ್. ಹೆಚ್ಚುವರಿ ಎಸ್.ಪಿ.ಹರಿಬಾಬು. ಡಿ.ವೈ.ಎಸ್.ಪಿ. ವಿಶ್ವನಾಥರಾವ್ ಕುಲಕರ್ಣಿ ಮಾರ್ಗದರ್ಶನದಲ್ಲಿ ಸಿ.ಪಿ.ಐ ಬಾಲಚಂದ್ರ ಲಕ್ಕಂ ಹಾಗೂ ತುರುವಿಹಾಳ ಪೋಲಿಸ್ ಠಾಣೆಯ ಪಿ.ಎಸ್. ಐ ಎರಿಯಪ್ಪ ನೇತೃತ್ವದಲ್ಲಿ ಪೋಲಿಸ್ ಸಿಬ್ಬಂದಿಗಳಾದ ಎ.ಎಸ್. ಐ ಹನುಮಂತ. ಹುಲುಗಪ್ಪ.ಹೆಚ್.ಸಿ.ತಿಪ್ಪಣ್ಣ. ಗೋಪಾಲ ರವರನ್ನೊಳಗೊಂಡಿರುವ ತಂಡವನ್ನು ರಚಿಸಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕಾರ್ಯಚರಣೆಗೆ ರಾಯಚೂರು ಜಿಲ್ಲಾ ಪೋಲಿಸ್ ವರಿಷ್ಠ ಅಧಿಕಾರಿಗಳು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

ವರದಿ-ಸೈಯದ್ ಬಂದೇ ನವಾಜ್ ಎಕ್ಸ್‌ಪ್ರೆಸ್ ಟಿವಿ ಸಿಂಧನೂರು

Please follow and like us:

Related posts

Leave a Comment