ಅಂಗನವಾಡಿ ಕಾರ್ಯಕರ್ತೆಯರ ವತಿಯಿಂದ ಪೋಷಣ್ ಮಾಸಾಚರಣೆ ರಥ ಕಾರ್ಯಕ್ರಮ..!

ಮಳವಳ್ಳಿ : ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಅಂಗನವಾಡಿ ಕಾರ್ಯಕರ್ತೆಯರ ವತಿಯಿಂದ ಪೋಷಣ್ ಅಭಿಯಾನ ಯೋಜನೆಯಡಿ ಪೋಷಣ್ ಮಾಸಾಚರಣೆ ಪೋಷಣ್ ರಥ ಕಾರ್ಯಕ್ರಮ ನಡೆಸಲಾಯಿತು.ಸಿಡಿಪಿಓ ಕುಮಾರ್ ರವರು ರಥವನ್ನು ಹಸಿರು ಬಾವುಟವನ್ನು ಹಾರಿಸುವ ಮೂಲಕ ಚಾಲನೆ ನೀಡಿ ಮಾತನಾಡಿ ರಾಜ್ಯ ವ್ಯಾಪ್ತಿ ಕೋವಿಡ್ 19 ಹರಡುತ್ತಿದ್ದ ಹಿನ್ನಲೆಯಲ್ಲಿ ನಮ್ಮ ಇಲಾಖೆ ಮಕ್ಕಳ ಪೋಷಣೆ ಬಗ್ಗೆ ಸೆ.07 ರಿಂದ 30 ರವರೆಗೆ ಪೋಷಣ್ ಮಾಸಚರಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದು ಇದರಲ್ಲಿ ಪ್ರತಿ ಗ್ರಾಮಕ್ಕೂ ರಥ ತೆರಳಿ ಮಕ್ಕಳನ್ನು ಹೇಗೆ ಪೋಷಣೆ ಮಾಡುವ ಬಗ್ಗೆ ಅರಿವು ಮೂಡಿಸುವ ಆಹಾರವನ್ನು ಹೇಗೆ ನೀಡಬೇಕು ತಿಳಿಸಿ ಕೊಡಲಾಗುವುದು ಎಂದರು ಇದಕ್ಕೂ ಮುನ್ನ ಕಚೇರಿ ಸಭಾಂಗಣದಲ್ಲಿ ಪೋಷಣ್ ಅಭಿಯಾನದ ಬಗ್ಗೆ ತರಕಾರಿ ಹಾಗೂ ಕಾಳುಗಳಿಂದ ತಾಯಿಮಗು ಚಿತ್ರ ಬಿಡುವ ಮೂಲಕ ಅಂಗನವಾಡಿ ಕಾರ್ಯಕರ್ತೆ ಎಲ್ಲರ ಗಮನ ಸೆಳೆದರು.ಕಾರ್ಯಕ್ರಮದಲ್ಲಿ ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಲತಾ, ಕಾರ್ಯದರ್ಶಿ ಶಿವಮ್ಮ, ಎಸಿಡಿಪಿಓ ಮಹೇಶ್, ಮೇಲ್ವಿಚಾರಕಿ ಮಂಜುಳ, ಶೈಲಾಜಾ, ಪಟ್ಟಣ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಹಾಜರಿದ್ದರು.

ವರದಿ- ಎ.ಎನ್ ಲೋಕೇಶ್ ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ

Please follow and like us:

Related posts

Leave a Comment