ಇದು ಕೆರೆಯಲ್ಲ ಕ್ಯಾತನಾಳ ಶಾಲಾ ಮೈದಾನ..!

ಶಹಾಪುರ ; ತಾಲ್ಲೂಕಿನ ಕ್ಯಾತನಾಳ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನ ಕೆರೆಯಂತಾಗಿ ನೀರು ನಿಂತು ಮಕ್ಕಳ ಆಟಕ್ಕೆ ಉಪಯೋಗಕ್ಕೆ ಬಾರದಂತಾಗಿದೆ ಎಂದು ಕಮಲ್ ಪಟೇಲ್ ಆರೋಪಿಸಿದ್ದಾರೆ. ಗ್ರಾಮೀಣ ಭಾಗದ ಮಕ್ಕಳಿಗೆ ಶಿಕ್ಷಣ ಸಲುವಾಗಿ ಸರ್ಕಾರ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಶಾಲಾ ಕಟ್ಟಡ ನಿರ್ಮಿಸುತ್ತಿದೆ ಅದರ ಜೊತೆಗೆ ಆಟದ ಶಾಲಾ ಮೈದಾನವೂ ನಿರ್ಮಾಣ ಮಾಡಿದೆ ಆದರೆ ಸ್ಥಳೀಯ ರಾಜಕಾರಣಿಗಳ ಹಾಗೂ ಅಧಿಕಾರಿಗಳ ಬೇಜವಾಬ್ದಾರಿಯಿಂದ ಮೈದಾನ ಗಬ್ಬೆದ್ದುನಾರುತ್ತಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಸಾಕಷ್ಟು ಬಾರಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನೆ ಆಗುತ್ತಿಲ್ಲ ಗ್ರಾಮದ ಜನತೆ ಹಾಗೂ ಶಾಲಾ ಮಕ್ಕಳು ಅಧಿಕಾರಿಗಳಿಗೆ ಹಿಡಿಶಾಪ ಹಾಕುವಂತಾಗಿದೆ.ಇನ್ನೇನು ಶಾಲೆಗಳು ಪ್ರಾರಂಭವಾಗುತ್ತಿವೆ ಕೂಡಲೇ ಆಟದ ಮೈದಾನ ದುರಸ್ತಿ ಮಾಡದಿದ್ದರೆ ಗ್ರಾಮ ಪಂಚಾಯಿತಿಗೆ ಬೀಗ ಜಡಿದು ಪ್ರತಿಭಟಿಸಲಾಗುತ್ತದೆ ಎಂದು ಗ್ರಾಮದ ಜನತೆ ಎಚ್ಚರಿಕೆ ನೀಡಿದ್ದಾರೆ.

ವರದಿ-ಬಸವರಾಜ್ ಸಿನ್ನೂರ ಎಕ್ಸ್ ಪ್ರೆಸ್ ಟಿವಿ ಶಹಾಪುರ

Please follow and like us:

Related posts

Leave a Comment