ಜೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕುರಿಗಳ ಸಾವು..!

ಲಿಂಗಸೂಗೂರು: ವಿದ್ಯುತ್ ತಂತಿ ಸ್ಪರ್ಶಿಸಿ 4 ಕುರಿಗಳು ಸಾವನ್ನಪ್ಪಿರುವ ಘಟನೆ ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಕಳ್ಳಿಲಿಂಗಸೂಗೂರಿನಲ್ಲಿ ನಡೆದಿದೆ. ಸಂಜೆ 6.30 ರ ಹೊತ್ತಿಗೆ ಕ್ಯಾನಲ್ ಹತ್ತಿರ ವಿದ್ಯುತ್ ತಂತಿ ಹರಿದು ಬಿದ್ದಿದ್ದರ ಪರಿಣಾಮ ಸುಮಾರು 40 ಸಾವಿರ ಬೆಲೆಬಾಳುವ 4 ಕುರಿಗಳು ಸಾವನ್ನಪ್ಪಿವೆ, ಇನ್ನೂ ಈ ಕುರಿಗಳು ಗ್ರಾಮದ ಬಸನಗೌಡ ಎಂಬುವವರಿಗೆ ಸೇರಿದ್ದಾಗಿವೆ ಎಂದು ತಿಳಿದುಬಂದಿದ್ದು, ತನಗೆ ಆಗಿರುವ ನಷ್ಟಕ್ಕೆ ಚೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ತನಗಾಗಿರುವ ನಷ್ಟಕ್ಕೆ ಅಧಿಕಾರಿಗಳೇ ದಂಡ ಕಟ್ಟಿ ಕೊಡಬೇಕೆಂದು ಪಟ್ಟು ಹಿಡಿದಿದ್ದಾರೆ.

ವರದಿ-ವೀರೇಶ್ ಅರಮನಿ ಎಕ್ಸ್ ಪ್ರಸ್ ಟಿವಿ ಲಿಂಗಸೂಗೂರು.

Please follow and like us:

Related posts

Leave a Comment