ಪೌರ ಕಾರ್ಮಿಕ ದಿನದಂದು ಪೌರ ಕಾರ್ಮಿಕರಿಗೆ ಅಪಮಾನ..!

ಬಾಗಲಕೋಟೆ: ವರ್ಷವಿಡಿ ನಗರದ ಸ್ವಚ್ಛತೆಗೆ ದುಡಿಯುವ ಪೌರ ಕಾರ್ಮಿಕರನ್ನು ಪೌರಕಾರ್ಮಿಕ ದಿನಾಚರಣೆಯಂದು ಅವರನ್ನ ಅಪಮಾನ ಮಾಡಿದ ಪ್ರಸಂಗ ಬದಾಮಿ ತಾಲ್ಲೂಕಿನ ಕೆರೂರು ಪಟ್ಟಣದಲ್ಲಿ ನಡೆದಿದೆ. ಪೌರ ಕಾರ್ಮಿಕರನ್ನು ಪೌರಕಾರ್ಮಿಕರ ದಿನಾಚರಣೆ ಎಂದು ಕೆಲಸ ಮಾಡಿಸದೆ ಅವರು ಗೌರವಿಸಬೇಕು ಎಂದು ಸರ್ಕಾರದ ಸುತ್ತೋಲೆ ಇದ್ದರೂ ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಮಾರುತಿ ನಡುವಿನಕೇರಿ ಪೌರಕಾರ್ಮಿಕರ ಕಡೆಯಿಂದ ಬೆಳಗ್ಗೆಯಿಂದ ಕೆಲಸ ಮಾಡಿಸಿ ಅವರನ್ನು ಅಪಮಾನಿಸಿದ್ದಾರೆ.ಇನ್ನು ಮುಖ್ಯಾಧಿಕಾರಿಗಳ ನಡೆಗೆ ಪೌರ ಕಾರ್ಮಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.೨೧ ಜನರು ಪೌರ ಕಾರ್ಮಿಕರಾಗಿ ಕಾರ್ಯ ನಡೆಸುತ್ತಿದ್ದಾರೆ.ಮುಖ್ಯಾಧಿಕಾರಿಗಳು ಪೌರಕಾರ್ಮಿಕರನು ಕೆಳಮಟ್ಟದಲ್ಲಿ ಕಾಣುತ್ತಾರೆ ಅವರ ಜೊತೆ ದುರ್ವರ್ತನೆಯಿಂದ ವರ್ತಿಸುತ್ತಾರೆ ಎಂದು ಆರೋಪವು ಕೇಳಿ ಬಂದಿದೆ. ತಾವು ಒಬ್ಭ ಮುಖ್ಯಾಧಿಕಾರಿಯಾಗಿ ಪೌರಕಾರ್ಮಿಕರ ಜೊತೆ ಈ ರೀತಿ ವರ್ತಿಸುವುದು ಸರಿಯೇ ಎಂದು ನಾಗರಿಕರು ಅವರ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವರದಿ- ಎಕ್ಸ್ ಪ್ರೆಸ್ ಟಿವಿ ಬಾಗಲಕೋಟೆ

Please follow and like us:

Related posts

Leave a Comment